ಬೆರಳಿಗೆ ಗುರುತು

ಬೆರಳಿಗೆ ಗುರುತು

ಕೋಟಿ ಕೋಟಿ ಬೆರಳುಗಳೇ
ಮಾಡಿಕೊಳ್ಳಿ ‘ತಿಲಕ’ ಧಾರಣೆ!
ಪ್ರಜಾಪ್ರಭುತ್ವದ ಕೀಲಿಯೇ
ಸಾರ್ವತ್ರಿಕ ಚುನಾವಣೆ

ವೋಟಿನ ನಂತರ

ಮತದಾನ ಮಾಡ ಹೊರಟೆ
ಸಿಕ್ಕಿತು ಸ್ವಾಗತ
ನಮಸ್ಕಾರ ಆದರ ಉಪಚಾರ
“ಇದೇ ಗುರುತಿಗೆ ಒತ್ತಿ” ಒತ್ತಾಯ
ಮರಳುವಾಗ
ನಾ ‘ಮಂಗ’ ಎಲ್ಲ ‘ಮಾಯ’

ಇದು ಸಮಯವಲ್ಲ!

ಈಗ ಪಂಚೆ ಸೀರೆ ಕುಕ್ಕರು
ಫ್ಯಾನ್ ಮೊಬೈಲ್ ಲಿಕ್ಕರು
ಕೊಳ್ಳುವಂಥ ಸಮಯವಲ್ಲ
ಚುನಾವಣೆ ಕಾಲ
ಹಣ ತೆತ್ತು ಕೊಂಡರೂ
ಸತ್ಯ ಯಾರೂ ನಂಬೋದಿಲ್ಲ!!

ಹನಿಗವನಗಳು

1

ಮಳೆಯಾಗದಿದ್ದರೇನು
ಆಶ್ವಾಸನೆಗಳದೇ ಮಹಾಪೂರ
ತಂಗಾಳಿ ಬೀಸದಿದ್ದರೇನು
‘ಗ್ಯಾರಂಟಿ’ ಬಲೆ ಬೀಸಿದ್ದಾರೆ ನೇರ

2

ಚುನಾವಣೆಗೆ ಹುಟ್ಟಿವೆ
‘ಚಿತ್ರ’ವಿಚಿತ್ರ ಘೋಷ ನುಡಿ
‘ಚೊಂಬು’ ಕೊಡುವರೆಂದು
‘ನಾಮ’ ಹಾಕುವವರ ಲೇವಡಿ

ಕೇಜ್ರಿವಾಲಾ ಕಾಲ

1

ಆಗ ತಿಂದರು ನುಂಗಿದರು
ಕೇಳಲಿಲ್ಲ ಯಾರೂ
ಈಗ ಮಾವಿನ ಹಣ್ಣು
ತಿನ್ನಲೂ ಹದ್ದಿನ ಕಣ್ಣು

2

ಮನೆಯದೇ ಊಟ
ಕಳಿಸುತ್ತಿದ್ದಾರಂತೆ ಜೈಲಿಗೆ
ಅದಕ್ಕೇ ಜೀವ ಭಯ
ಬಂದಿತೇ ಕೇಜ್ರಿಗೆ!?

3

‘ಇಡಿ’ಯನ್ನು ಛೂಬಿಡಿ
ಸಲಹೆ ಕೊಡುತ್ತಿದ್ದವರೇ
‘ಇಡಿ’ಗೇ ಆರೋಪ ಕೈಬಿಡಿ
ಅನ್ನೊ ಬೇಡಿಕೆ ಸರಿಯೆ!?

ಜೈ ಶಂಕರ್

ವಿದೇಶ ಸಚಿವರ ಮಾತು
ನೇರ ಖಚಿತ ಆಪ್ಯಾಯ
ಅವರ ನಡೆ ನುಡಿ ನಗೆ
ಸ್ವದೇಶದಲ್ಲೀಗ ಭಾರೀ ಜನಪ್ರಿಯ

ಜೈಶಂಕರ್ ನಮಗೆ ಇಷ್ಟ
ಅವರ ಮಾತು ನಿರ್ದಿಷ್ಟ
ವಿದೇಶ ನೀತಿಯೂ ಸ್ಪಷ್ಟ
ಸ್ನೇಹದ ಕೈ ಚಾಚಿದವರಿಗೆ
ಬಾಂಧವ್ಯದ ಬಂಧವಿದೆ
ಕುಹಕವಾಡಿದವರಿಗೆ
ಬಿಸಿ ಮಾತ ಬರೆ ಇದೆ

ಭಾರತ ವಿದೇಶಾಂಗ ಸಚಿವರಿಗೆ
ವಿದೇಶಿಯರಿಂದ ಮಾತಿನ ಬಾಣ
ಸಚಿವರದು ಮೆಲುದನಿ, ಕಿರುನಗೆ
ಉತ್ತರಗಳೋ ರಾಮಬಾಣದ ತೀಕ್ಷ್ಣ

ಹೊರದೇಶಗಳ
ದಶಕಗಳ ಸದ್ದು ಗದ್ದಲ
ಅಪಸ್ವರ ಹದ್ದುಬಸ್ತಿಗೆ ತಂದರು
ಜೈಶಂಕರರು!

ಸೊರೊಸ್ ದಂತ ಗೋಪುರದಿಂದ
ಬಂದ ಬಡಬಡಿಕೆಗೂ
ಇಲ್ಲಿನ ಚೀರುವಿಕೆಗೂ
ಇರುವ ಸಂಚಿನ ಆಳ
ಅನಾವರಿಣಿಸಿದರಾ ಜೈಶಂಕರ!

ಭಾರತ ವಿದೇಶ ನೀತಿ
ಕೆಲವರು ಒಪ್ಪರು
ಅಪಸ್ವರದ ರೀತಿ
ಅವೆಲ್ಲಕ್ಕೀಗ ಇತಿಶ್ರೀ!
ಸ್ಪಷ್ಟ ನೇರಮಾತಿನ ಟಕ್ಕರ್
ಕೊಡುತ್ತಿರವವರು ಜೈಶಂಕರ್

ಯಾವ ಭಾವದ ನೆರಳು

ಮರಗಳ ಎಲೆಗಳ ಮರೆ
ಕೋಗಿಲೆ ಕಾಣದು ಎಲ್ಲೂ
ಯಾರೇ ಕೇಳಲಿ ಬಿಡಲಿ
ಎದೆ ಆಳದಿಂದಲದರ ಕುಕಿಲು

ಬಿಸಿಲಿನ ತಾಪಕೆ ಅದು ದೂರಿದೆಯೇ
ಸಹಿಸಲಾರದೇ ಬೇಗೆ ?
ನೆರಳಿನ ತಂಪ ಸವಿದು ಹೊಗಳಿದೆಯೇ
ಪ್ರಕೃತಿ ಇತ್ತ ಸೊಗಕೆ !

ಹಕ್ಕಿಯೊರಲ ಒಡಲಲಿ ಇದೆಯೆ
ಕರುಳ ಕತ್ತರಿಸಿ ಹಾರಿದ
ಅಮ್ಮನ ಕಾಣುವ ಬಯಕೆ

ಕೂಗುವ ಕಂಠದಿ ಕೇಳಿದೆಯೆ
ತುತ್ತನಿತ್ತೂ ಹೊರಹಾಕಿದ
ಸಾಕಿದ ತಾಯಿಯ ನೆನಕೆ

ಯಾವ ಭಾವ ಕೋಗಿಲೆ ಕೂಗಲಿ
ತುಂಬಿ ಹಾಡಾಗಿದೆಯೋ
ಕೇಳುವವನ ಭಾವದ ನೆರಳು
ಹಕ್ಕಿಯ ಕಂಠದಿ ಧ್ವನಿಸುತ್ತಿದೆಯೋ

ಅಭಿನಂದನ

ಕರಾಚಿಯಿಂದ ದೇಶದ ಉಡಿಗೆ

ಮಾತೃಭೂಮಿಯ ಸೇವೆಗೆ

ಅಂದು ಲಾಲ ಕೃಷ್ಣಾಗಮನ

ಏರು ಪೇರಿನ ದಾರಿ ಕಠಿಣ

ರಾಮ ಪಠಣ

ಮಂದಿರಕೆ ಪಣ

ಕನಸ ಬಿತ್ತಿದವನ ಮುಡಿಗೆ

ಇಂದು ಸಂದಿತು ಭಾರತ ರತ್ನ

ಲಾಲಾ ಲಜಪತರಾಯ್‌

ಜನ್ಮದಿನ

ಆಂಗ್ಲರ ಲಾಠಿ
ಬಂದೂಕಿನ ಗುಂಡು
ನಡುಗಿತು ಕೇಸರಿ ಘರ್ಜನೆಗೆ
ಸ್ವಾತಂತ್ರ್ಯದ ಹೋರಾಟಕೆ
ಬಲ ಬಂದಿತು
ಜನ ಒಂದಾದರು ಲಾಲಾ ಲೇಖನಿಗೆ
ಅಮರ ನೀವು
ಲಜಪತರಾಯರೆ
ಹಸಿರಾಗಿರಲಿ
ಸದಾ ನಮ್ಮಲಿ ಕ್ರಾಂತಿ ಸೆಲೆ

ದಶಕದ ದಂಡ

“ಮರುಪಾವತಿಸಿ ಒಂದು ದಶಕ
ಹೆಚ್ಚುವರಿ ಪಡೆದ ಪಗಾರ”
ಅಂತ ಕಣ್ಣನ್‌ ನೋಟೀಸು ಪಡೆದರಾ!
ಕೋದಂಡ ರಾಮನ ಪೂಜೆಗೆ
ಮೇಲ್‌ ಕನ್ನಡ ನುಡಿ ಅರ್ಚನೆಗೆ
ದಂಡ ಕಟ್ಟಿ ಅಂತಿದೆಯಾ ಸರ್ಕಾರ!?

ಆಡಿಟ್ಟು ಕಟ್ಟುನಿಟ್ಟು

‘ಪಡೆದಿದ್ದೀರಿ ಹತ್ತು ವರ್ಷ
ಸಂಬಳ ಹೆಚ್ಚುವರಿ’ ಅಂತ
ನೋಟಿಸು ಪಡೆದರು ‘ಕನ್ನಡ ಪೂಜಾರಿ’
ಕೋದಂಡ ರಾಮನ ಪೂಜೆಗೆ
ಮೇಣ್ ಕನ್ನಡ‌ದಲ್ಲಿ ಮಾಡಿದ ಅರ್ಚನೆಗೆ
ಆಡಿಟರು ಸಧ್ಯ ಮಾಡಿಲ್ಲವಂತೆ ಕಿರಿಕಿರಿ!!