ಕಡೆದಿಟ್ಟ ದಿಟ್ಟರು

badami

ನಾಡು ನುಡಿ
ಕಡೆದಿಟ್ಟ ದಿಟ್ಟರು

 

 

 

ಶಾಂತರು ಅವಿಶ್ರಾಂತರು
ವಿನೀತರು ವಂದ್ಯರು
ಅಹಮಿಕೆ ದೂರವಿಟ್ಟವರು
ಸಹಮತದಿ ನಡೆವವರು
ಕರ್ನಾಟಕದ ದಿಟ್ಟರು
ಎಂದು ಬೆನ್ನುತಟ್ಟಿಕೊಳ್ಳೆವು

ಕೈ ಚಾಚಿದರೆ ಮೈದಡವಿ
ದುಡಿಸದೆಲೆ ಉಪಚರಿಸಿ
ಅಶನ ಅರಿವೆ ಅಂದಣವ
ನೀಡಿ ಅಂದಗಾಣುವವರು
ಕಲಿಗಳಲ್ಲಿ ಕಲಶಪ್ರಾಯ ಕನ್ನಡಿಗರು
ಎಂದು ಬೀಗೆವು

ಜಗದ ಕಷ್ಟಗಳೆಲ್ಲ
ನನ್ನದೆನ್ನುವ ಹೃದ್ಯರು
ಸಹನೆಗಾನದ ಹಸನು ಮನಸಿನ
ಸಾಮರಸ್ಯದ ಹರಿಕಾರರು
ಕಂನಾಡ ಚೆನ್ನುಡಿಗರು
ಎಂದು ಡಂಗುರಿಸೆವು

ಕೊಡುಗೈಯ ಕರ್ಣರು
ರಾಷ್ಟ್ರ ಸಮ್ಮಾನಕ್ಕಾದ್ಯರು
ಆಢ್ಯ ಅಪ್ರತಿಮ ಅಜಾತರು
ನಿಸ್ವಾರ್ಥಿ ನಿರಪೇಕ್ಷರು
ಕರುನಾಡ ಕಂಪಿನವರು
ಎಂದು ಸ್ವಘೋಷಕರಾಗೆವು

ರಸಾಸ್ವಾದಿ ಸಂಪನ್ನರು
ಕಲಾರಾಧಕ ಕುಲರು
ಕೆಚ್ಚಿಗೆ ಅನ್ವರ್ಥ ಅನುರೂಪರು
ಅಸೀಮ ವೀರರ ಬೀಡು
ಕುಶಾಗ್ರಮತಿಗಳ ಕಣಜ ಕರ್ಣಾಟ
ಎಂದು ಅಹಮಿಸೆವು

ಚಾರಿತ್ರರು ಚರಿತೆಯುಳ್ಳವರು
ಜೇನಿಗರು ಸಾಕ್ಷರರು
ಸುಮನಸ ಸೂಕ್ಷ್ಮರು
ನಾಡು ನುಡಿ ಕಡೆದಿಟ್ಟ
ಕರ್ಮಜರು ಕನ್ನಡಿಗರು
ಎಂದಿಗೂ ನಮ್ಮ ಪೂರ್ವರ ನೆನೆದೇವು

– ಅನಂತ ರಮೇಶ್

Halebeed

(ಚಿತ್ರ ಕೃಪೆ: ಅಂತರ್ಜಾಲ)

Advertisements

ಅಪ್ಪಟ ಚಿನ್ನ

gold

ಯುರೇಕಾ ಯುರೇಕಾ 

ಅಂದ ಆರ್ಕಿಮಿಡಿಸ್

ಕಂಡುಹಿಡಿಯಲಿಲ್ಲ

ಪ್ರೇಮ ಅಳೆಯುವ ಸಾಧನ

ಇದ್ದಿದ್ದರೆ ತೋರಬಹುದಿತ್ತು

ನಲ್ಲೆಗೆ ನನ್ನ ಪ್ರೇಮ

ಅಪ್ಪಟ ತೂಕದ ಚಿನ್ನ