ಕೊತ್ತಂಬರಿಸೊಪ್ಪು

virat

ಬಾಲಿವುಡ್‌ ಹಾಲಿ ತಾರೆಯರು
ತಮ್ಮ ಗಂಡಂದಿರ ಪಾಲಿಗೆ ಬಾರ್ಬರುಗಳು
ಎಲ್ಲಕಡೆ ಅವರ ಸಾಧನೆಯ ಸಾಕ್ಷಿಗೆ ಫೋಟೋಗಳು!
ಮಡದಿ ಯಾವ ತಾರೆಗೆ ಕಮ್ಮಿ
ನನ್ನ ರಮಿಸಿ ಎಳೆದು ಕೂರಿಸಿ ಚಾಕುಕತ್ತರಿ ಚಕಚಕ
ತಲೆಗಾಡಿಸಿ ಅಂದಳು ʼಕೊತ್ತಂಬರಿಸೊಪ್ಪು ಹೆಚ್ಚಿದಂತಿದೇರಿ!ʼ

ಲಾಕ್‌ ಡೌನ್‌ ನಾಯಿ

dog

ಲಾಕ್‌ಡೌನಲ್ಲಿ ನಾಯಿಯೂ ಡಲ್ಲು
ರೋಡಲ್ಲಿ ಅಟ್ಟಿಸಿ ಹೋಗಲು
ಇಲ್ಲವಲ್ಲ ಕಾರು ಸ್ಕೂಟರು
ಬೊಗಳಲೂ ಕಾಣಿಸರೆಲ್ಲೂ
ಚಿಂದಿ ಆರಿಸೋ ಮಕ್ಕಳು
ಯಾರ ಗುರುತೂ ಸಿಕ್ಕುತ್ತಿಲ್ಲ
ಎಲ್ಲ ಮುಖಗಳೂ ಮಾಸ್ಕು
ಬಾಲವಲ್ಲಾಡಿಸೋದೂ ಮರೆತಿತು
ಕುಳಿತಲ್ಲೇ ಕುಳಿತು ಕುಳಿತು
ಸಪ್ಪೆ ಸೋಮಾರಿ ಡಾಗ್‌ಉ

 

(Source:WhatsApp Messages)

ವಿಶ್ವಯುದ್ಧ

vr-handsoap_jpg

ವಿಮಾನ ಟ್ಯಾಂಕರು ಅಣುಬಾಂಬು
ಮದ್ದುಗುಂಡು ರೈಫಲು
ಸಂಗ್ರಹಕೆ ತೊಡಗಿದವು ದೇಶಗಳು
ಅಂದು ಇತ್ತು ವಿಶ್ವಯುದ್ಧದ ಛಾಯೆ

ಇಂದು ಸಾಗಿದೆ ಯುದ್ಧ
ಸಂಗ್ರಹ ಮಾಸ್ಕು ಸೋಪು ಸ್ಯಾನಿಟೈಜರು
ಕೈತೊಳೆದು ತೊಲಗಿಸೆ ವೈರಾಣು
ವಿಶ್ವವೇ ಲಾಕ್ ಡೌನು, ಇದಾವ ಮಾಯೆ!

(Source:WhatsApp message)

ಪುಢಾರಿಯ ಬ್ಯಾಂಕು

p2

ರಾಜಕಾರಣಿ ಕೋರಿದ ಕೈಮುಗಿದು
“ತಬ್ಲೀಘ್‌ ತಬ್ಲೀಘ್‌ ಅನ್ನುವ
ಅಪಪ್ರಚಾರ ನಿಲ್ಲಿಸಿ ಸಾಕು
ಹಾಳಾಗಿ ಹೋಗುತ್ತೆ ಬ್ಯಾಂಕು”
ಮಂದಿ ತಬ್ಬಿಬ್ಬು; ಕೇಳಿದರು “ಯಾವ ಬ್ಯಾಂಕು!?”
ಬಂತು ಉತ್ತರ “ಬ್ರೋ…ನಮ್ಮ ವೋಟ್‌ ಬ್ಯಾಂಕು”

 

(Pic:Google)

ಟೀನೇಜು

diya

ಕೊವಿಡ್‌ ಹತ್ತೊಂಭತ್ತು
ಅದಕ್ಕಿನ್ನೂ ಟೀನೇಜು!
ಲಗಾಮಿಲ್ಲದವರದು ಅದಕ್ಕೀಗ ಸಾಥು!!
ಅಪಾಯದ ಜಹಜು; ಹಾಕು ಲಂಗರು
ಅಜ್ಞಾನ ಸುಟ್ಟು ದೀಪ ಹಚ್ಚು
ದೂಡು ವೈರಸ್ಸು; ಸಡಿಲಿಸದಿರು ಪಟ್ಟು

ತಿನ್ನುವ ಯೋಗ

eat

ಪಂಡಿತರೆಲ್ಲ ಭವಿಷ್ಯ ನುಡಿದಿದ್ದಾರೆ
ಮನೆಯೊಳಗೇ ಇದ್ದರೆ
ಬರುವುದಂತೆ ಕುಳಿತು ತಿನ್ನುವ ಯೋಗ
ಹೊರಗೆ ಹೋದರೆ
ತಿನ್ನಬೇಕಂತೆ ಥಳಿತ ಮತ್ತೆ
ವೈರಸ್ಸು ನಮ್ಮನ್ನೇ ತಿನ್ನುವ ರೋಗ

(Pic : Googgle)

ದೂರು

hc2

“ನೀವು ಆಫೀಸು ಕೆಲಸ
ಸರಿಯಾಗಿ ಮಾಡುವುದಿಲ್ಲ
ಅಂತ ನನಗೆ ಗೊತ್ತು” ಮಡದಿ ನುಡಿ
ಕೇಳಿದೆ, ʼʼಅದು ಹೇಗೆ ಹೇಳುತ್ತೀ!?ʼʼ
“ನೀವು ಮಾಡಿದ ಅಡುಗೆ
ಗಂಟಲಲ್ಲಿಳಿಯುತ್ತಿಲ್ಲ ಒಂದು ತುತ್ತೂ
ನೀವು ತೊಳೆದ ತಟ್ಟೆ ಪಾತ್ರೆಯಲ್ಲಿ
ಕೊಳೆ ಅಂಟೇ ಇತ್ತು” ಬಂತು ಕಿಡಿ

 

(Pic courtesy:Google)

ಮಾಸ್ಕು

Masque

ʼಅರೆ ಭಾಯಿ ಐಸಾ ನ ಕರೋನ
ಮಾಸ್ಕ್‌ಗೆ ಹೋಗೋವಾಗ
ಹಾಕಿ ಮಾಸ್ಕ್‌ ನʼ
ʼಮಾಸ್ಕ್‌ಗೆ ಮಾಸ್ಕಾ !?
ಹಾಕ್ದಿದಿದ್ರೆ ಜೀವಕ್ಕೆ ರಿಸ್ಕಾ?ʼ
ಕೇಳಬೇಡಿ ಇಂಥಾ ಪ್ರಶ್ನೆನ!

(Pic from Google)

ಆರಾಮವಾ ಕುಶಲವಾ!

ram

ಪುರುಷೋತ್ತಮನ ನೆನೆಯಿರಿ
ಪಾನಕ ಕೋಸಂಬರಿ ಸವಿಯಿರಿ
ಇರಿ ಮನೆಯೊಳಗೇ; ಹಾಡಿರಿ
ಬೇಸರೆವೆನಿಸೆ ಓದಿರಿ ಬರೆಯಿರಿ
ಅದು ʼಏಸುʼ ಆʼರಾಮʼ ʼಅಲ್ಲʼವಾ
ದೂರದೆ ನಮಿಸಿ ವಿಚಾರಿಸಿ ʼಕುಶಲವಾʼ !