ಪುಕ್ಕಟೆ ಸಲಹೆ

funnel

ಕದ್ದಾಲಿಕೆಗೆ
ಸಿಬಿಐ ವಿಚಾರಣೆ ಏಕೆ?
ಸೀಮೆಎಣ್ಣೆ ಮಾರುವ
ನ್ಯಾಯಬೆಲೆ ಅಂಗಡಿಗೆ
ಮಾಡಿ ವಿಚಾರಣೆ
ಕೇಳಿದಷ್ಟು ಆಲಿಕೆ
ಸಿಗದೆ ಇದ್ದೀತೆ!

(Pic:Google)

ತೆರಿಗೆ (ಅ)ಭಯ

VVIT

ಐಟಿ ಇಲಾಖೆ ಇನ್ನು ಮುಂದೆ
ತೆರಿಗೆದಾರರ ಸ್ನೇಹಿ ಎಂದು ತಿಳಿಸಿದೆ
ಅದು ಇದುವರೆಗೆ
ಶತ್ರುವಂತೆ ಇದ್ದಿತ್ತೆ
ಅನ್ನುವ ಅನುಮಾನಕ್ಕೆ
ಮತ್ತೆ ಬಲ ಬಾರದೆ !

ಸ್ವಾತಂತ್ರ್ಯ ಹರಣ

bsy

ಮಣೇಕ್‌ ಶಾ ಮೈದಾನ
ಮುಖ್ಯಮಂತ್ರಿಗಳಿಂದ
ಸ್ವಾತಂತ್ರ್ಯ ಧ್ವಜಾರೋಹಣ
ಇದ್ದಿತ್ತೆ ಆಗ ಮನದಲ್ಲಿ
ಸಂಪುಟ ರಚನೆಯ
ತನ್ನ ಸ್ವಾತಂತ್ರ್ಯ ಹರಣ
ಆದ ಅಸಮಾಧಾನ!?

ಓಗೊಡು

 

photo-1562172530-062aa8560b26

ಅದು ಭಕ್ತರ ಬೀಡು 
ಮೈಕಿನಲ್ಲಿ ಹಾಡು
ಪರಿಪರಿಯ ರಾಗದಲ್ಲಿ
ಎಲ್ಲಿರುವೆ ತಂದೆ ಬಾರೋ…

ಸಭೆ ಮುಗಿಯಿತು
ಒಂದು ಮಗು ಕಾಣದು
ಮೈಕಿನಲ್ಲಿ ಕರೆದರು
ಎಲ್ಲಿರುವೆ ಕಂದ ಬಾರೋ
ಓಡಿ ಬಂತು ಮಗು ನಗುತ
ಕರೆಗೆ ಕರಗುತ ಓಗೊಡುತ

(Pic:Unsplash)

ಕುದುರೆ ವ್ಯಾಪಾರ

htrade

ಏನಿದು ಕುದುರೆ ವ್ಯಾಪಾರ?
ಅವರವರ ಮೂಗನೇರಕ್ಕೆ ರಾಜಕಾರಣಿಗಳೇ
ಬರೆಯತೊಡಗಿದ್ದಾರೆ ವ್ಯಾಖ್ಯೆ!

ಒಂದು ಪಕ್ಷದವರ ಆರೋಪ
“ಹಣಸುರಿದು ಕೊಂಡಿದ್ದಾರೆ ಶಾಸಕರನ್ನ
ಮಾಡುತ್ತಿದ್ದಾರೆ ಕುದುರೆ ವ್ಯಾಪಾರ”
ಮತ್ತೆ ಅವರದೇ ಕರೆ ಹೊರ ಹೋದವರಿಗೆ
“ಹಿಂತಿರುಗಿ ಬನ್ನಿ; ಬೇಡಿಕೆಗಳ ತನ್ನಿ
ನಿಮ್ಮಾಸೆಗಳ ಪೂರೈಕೆ ಆಯಿತೆನ್ನಿ
ನಾವು ಬಿಟ್ಟೆವು; ನಿಮಗೇ ಇನ್ನು ಮಂತ್ರಿಗಿರಿʼʼ
ಇದಲ್ಲವೆ ವ್ಯಾಪಾರದ ಮತ್ತೊಂದು ಸನ್ನಿ!?

(Pic courtesy: Artist (Google)

ವ್ರಣಮಾಗಿತು

Parliament

ಲೋಕಸಭೆ ಮತ್ತು ರಾಜ್ಯಸಭೆ
ಭಾರೀ ಸದ್ದು ಎರಡೂ ಕಡೆ
ಅಮಿತಶಾ ಮಸೂದೆಯಲ್ಲಿಟ್ಟದ್ದು
ಕಾಶ್ಮೀರ ಸಮಸ್ಯೆಗೆ ಮದ್ದು
ಚಿಕಿತ್ಸೆಯಾಗಿ ವಿಧಿ 370 ರದ್ದು
ಫಲ: ದೇಶದ ವ್ರಣ ಮಾಗಿದ್ದು

(Pic:Internet)

ಮುಕುಟ

Kashmir

ಭಾರತದ ಮುಕುಟ ಕಾಶ್ಮೀರ
ಹೊಳೆಯುತ್ತಿದೆ ಈಗ ಫಳಫಳ
ಅಂಟಿದ್ದ ʼವಿಧಿಗಳʼ ಮಸಿಯ
ತೊಳೆವ ಕಾರ್ಯಕ್ಕೆ ತೊಡಗಿಸಿದ್ದು
ಮೋದಿ-ಶಾರ ಅಮಿತ ಛಲ

ಸ್ವಾರ್ಥಿಮಂದಿಗಳ ದೂರಕ್ಕೆ ಸರಿಸಿ
ನಿಜ ಪ್ರಜೆಗಳ ಕೈಗೀಗ ಕಿರೀಟ
ಆಗಸ್ಟ್ ಐದು ಇತಿಹಾಸದ ಹರ್ಷ
ಎರಡುಸಾವಿರದ ಹತ್ತೊಂಭತ್ತು
ಮರೆಯಲಾಗದ ವರ್ಷ