ವೀರನ ದಿನ

ವಿನಾಯಕ ದಾಮೋದರ ಸಾವರ್ಕರ್
ಹುಟ್ಟಿದ ದಿನವಿಂದು
ಆಂಗ್ಲರ ಹುಟ್ಟಡಗಿಸೆ ಹುಟ್ಟಿದ ಕ್ಷಾತ್ರನ
ನೆನಪೂ ಮುಂದು
ರಾಷ್ಟ್ರಧರ್ಮದ ಹರಿಕಾರನಿಗೆ ಮ್ಲೇಛರ
ನಿಂದೆ ಇತ್ತು ಅಂದು
ನೆಲದ ಬಿಡುಗಡೆಯ ಕಿಚ್ಚುಗಾರನಿಗೆ
ಶಿಕ್ಷೆ ಒಂದರಹಿಂದೊಂದು
ಅಂಥ ಧೀಮಂತನಿಗೆ ಜರಿವ ಚಪಲದಲಿ
ಇದ್ದೇವಲ್ಲ ಇಂದೂ!
ಕತ್ತಲೆ ಕಳೆಯದ ಶಾಪದ ನೆರಳಿಗೆ
ಸಾವರ್ಕರ್ ಬೆಳಕ ತರುವ ಬಂಧು

(Pic courtesy: Google)

“ಅಮ್ಮಚ್ಚಿ…” ಎಂಬ ನೆನಪಿನಲ್ಲುಳಿಯುವ ಚಿತ್ರ

ʼಅಮ್ಮಚ್ಚಿ ಎಂಬ ನೆನಪುʼ 2018ರಲ್ಲಿ ಬಹಳ ಸದ್ದು ಮಾಡಬೇಕಿತ್ತು. ಹೌದು, ಕಲಾತ್ಮಕ ಚಿತ್ರಗಳ ನಡುವೆ ಅದರ ಸದ್ದು ಕರ್ನಾಟಕದಾಚೆಗೂ ಕೇಳಬೇಕಿತ್ತು. ಅದೇನೂ ನನಗೆ ತಿಳಿಯದು.

ಡಾ. ವೈದೇಹಿಯವರ ಕತೆಗಳ ಗೊಂಚಲಿನಿಂದ ʼಅಮ್ಮಚ್ಚಿʼ ಚಿತ್ರ ಅರಳಿದೆ. ಚಲನಚಿತ್ರ ವೀಕ್ಷಣೆ ಇತ್ತೀಚೆ ಕಡಿಮೆಯಾದ ಕಾರಣ, ಈ ಚಿತ್ರ ಇತ್ತೀಚೆಗೆ ʼನೆಟ್‌ ಫ್ಲಿಕ್ಸ್‌ʼ ಅಲ್ಲಿ ನೋಡಬೇಕಾಯಿತು. ಚಿತ್ರ ಬಿಡುಗಡೆಯಾದಾಗ ಹೆಚ್ಚು ಸುದ್ದಿಯಾಗಿದ್ದರೆ ಈ ಹಿಂದೆಯೇ ನೋಡಿರುತ್ತಿದ್ದೆನೋ ಏನೋ.

ಅಬ್ಬಾ! ʼನೇಟಿವ್‌ ಟಚ್ʼ ಅಂದರೆ ಇದು. ಕುಂದಾಪುರದ ಹಳ್ಳಿ, ಜನರ ನಡೆ, ಅಲ್ಲಿಯ ಅಚ್ಚ ಹಳಗನ್ನಡಕ್ಕೆ ಹತ್ತಿರದ ಭಾಷೆ, ಉಡುಗೆ ಹಾಗೇ ಮುಗ್ಧತೆ ಎಲ್ಲವೂ ಚಿತ್ರದೊಳಗಿಳಿದು ನೋಡುಗನನ್ನು ಮೈ ಮರೆಸುತ್ತದೆ. ಸ್ತ್ರೀ ಶೊಷಣೆಯ ಹಲವಾರು ಮುಖಗಳು ಕಥೆಯ ಭಾಗವಾಗಿದ್ದರೂ ಅವನ್ನೆಲ್ಲ ತುರುಕಿದಂತೆ ಅನಿಸುವುದಿಲ್ಲ. ಎಲ್ಲೂ ಭಾವಾತಿರೇಕಗಳಿಲ್ಲ. ಹಾಗಾಗಿ ನೋಡುಗನ ಮನಸ್ಸು ಕರಗಿಸಿಬಿಡುತ್ತದೆ. ಅಮ್ಮಚ್ಚಿ ಎಂಬ ಹದಿಹರೆಯದ ಹುಡುಗಿಯ ಕನಸಿನೊಂದಿಗೆ, ನಿಜ ಜೀವನದ ಕಠುರತೆಗಳನ್ನು ನಿರ್ಲಿಪ್ತದಲ್ಲಿ ಹೇಳುವ ಕಲಾವಂತಿಕೆ ಚಿತ್ರದಲ್ಲಿದೆ.

ಕಥೆಯ ಹಂದರಕ್ಕೆ ಪಾತ್ರಗಳ ಆಯ್ಕೆ ಅತ್ಯುತ್ತಮ. ಇಲ್ಲಿ ಯಾರೂ ಅಭಿನಯಿಸಿಲ್ಲ. ಪಾತ್ರಗಳ ಜೀವವೇ ಆಗಿಬಿಟ್ಟಿದ್ದಾರೆ. ಹೀಗೆ ಪ್ರತಿ ಪಾತ್ರವೂ ನಮಗೊಂದು ವಿಸ್ಮಯ. ಮಿತಿ ಇಲ್ಲದಷ್ಟು ಸಹಜತೆ! ಈ ಉದ್ಗಾರವೇ ನನಗೆ ತೋಚಿದ ಶ್ಲಾಘಿಸುವ ರೀತಿ!

ಛಾಯಾಗ್ರಹಣ, ಸಂಗೀತ ಮತ್ತು ಹಾಡುಗಳು ಹದ ಮಿಳಿತ, ಸುಂದರ.

ʼಕೆಲ ಹೂವ ಹಣೆ ಬರಹ ಅರಳಿದೊಡೆ ಬಾಡಲು…ʼ
ʼಸರಪಳಿ ಇಲ್ಲದೆ ಬಂಧಿ ಇವಳೀ ಹುಡುಗಿ ….ʼ,
ʼಏಳು ಸುತ್ತಿನ ಕೋಟೆ ಸುತ್ತಿ ಕೊಲ್ಲುವ ಕೋಟೆ…ʼ,

ಎಲ್ಲ ಆರು ಹಾಡುಗಳು ಇಂಪು. ನನಗೆ ಹೆಚ್ಚು ಇಷ್ಟವಾದವು ಈ ಮೂರು.

ನಿರ್ದೇಶಕಿ ಚಂಪಾ ಪಿ ಶೆಟ್ಟಿ ಕನ್ನಡದ ಶ್ರೇಷ್ಠ ನಿರ್ದೇಶಕರ ಸಾಲಿಗೆ ಸಲೀಸಾಗಿ, ಸದ್ದು ಮಾಡದೇ ಸೇರಿಬಿಟ್ಟಿದ್ದಾರೆ.

ʼಅಮ್ಮಚ್ಚಿʼ ಈಗಾಗಲೇ ಪ್ರಶಸ್ತಿಗಳನ್ನು ಬಾಚಿಕೊಳ್ಳಬೇಕಿತ್ತು. ಅದರ ʼರೇಟಿಂಗ್ʼ ಅತ್ಯುತ್ತಮವಿರಬೇಕಿತ್ತು. ದೊಡ್ಡ ಸಂಖೈಯಲ್ಲಿ ಜನ ಚಿತ್ರ ನೋಡಬೇಕಿತ್ತು. ವಿಮರ್ಶಕರಿಂದ ಪ್ರಶಂಸೆಯ ಸುರಿಮಳೆಯಾಗಬೇಕಿತ್ತು. ಅವೆಲ್ಲ ಆಯಿತೋ ಇಲ್ಲವೋ ತಿಳಿಯುತ್ತಿಲ್ಲ.

ಎಲ್ಲರ ಅದ್ಭುತ ಅಭಿನಯಗಳ ನಡುವೆ ನನಗೆ ನೆನಪಲ್ಲಿ ಅಚ್ಚೊತ್ತಿರುವುದು ಶ್ರೀ ರಾಧಾಕೃಷ್ಣ ಉರಾಳರ “ಪುಟ್ಟಮ್ಮತ್ತೆ” ಪಾತ್ರ! ಶ್ರೀ ರಾಜ್‌ ಬಿ ಶೆಟ್ಟಿ ಅಭಿನಯದಲ್ಲಿಇಲ್ಲೂ ಅಸಾಮಾನ್ಯತೆ ಮೆರೆದಿದ್ದಾರೆ!

ಇಷ್ಟೆಲ್ಲ ಬರೆದದ್ದು ಯಾಕೆಂದರೆ ನೀವೂ ನೋಡಬಾರದೇಕೆ ಅನ್ನುವ ಪ್ರಕಟಿತ ಆಸೆ!

ಇನ್ನು ನನ್ನ ʼಸ್ಟಾರ್‌ ರೇಟಿಂಗ್‌ʼ ಎಷ್ಟು ಕೇಳಿದರೆ, ʼಐದಕ್ಕೆ ಪೂರಾ ಐದುʼ.

(Pic from Google)

ಲಾಕ್‌ ಡೌನ್ ಆಗದ ಹಕ್ಕಿ

birds n shoe1

ಹೊರ ಅಂಗಳದಲ್ಲಿ ಬೈಕು
ನನ್ನ ಹೊರದೆ ಹೊರ ಹೋಗದೆ
ನಿಂತಲ್ಲೆ ನಿಂತೂ ನಿಂತು
ಹತ್ತೆಂಟು ಹಕ್ಕಿ ಸ್ನೇಹ ಬೆಳೆಸಿತು
ದಿನ ಬೆಳಗುಸಂಜೆ ಎಷ್ಟೋ ಬಣ್ಣ
ಪುಚ್ಛ ಹಾಡು ಕೊರಳ ಜೋಡಿ
ಆಟ ಬೈಕುಕನ್ನಡಿಗಳೆ ಒಡನಾಡಿ

ಕಾಗೆ ಕೂಡಾ ಕನ್ನಡಿ ಇಣುಕಿ
ತನ್ನ ಸೌಂದರ್ಯಕ್ಕೆ ಮಾರು
ಹೋಗಿ ಕರೆಯಿತು ಬಳಗ ಕೂಗಿ

ಚಿಕ್ಕ ಹಕ್ಕಿಗಳು ಕಾರು ಬಾನೆಟ್ಟ ಸಂದು
ಮೂಲೆ ಶೂ ಮಾಡಿಕೊಂಡವು ಗೂಡು
ಹಸಿರು ಹೂ ಗಿಡ ಬಳ್ಳಿ ಬೈಕು ಕಾರು
ಒಂದಾಗಿ ಬಾಂಧವ್ಯ ಹೆಣೆದು
ಹೊರಾಂಗಣ ಈಗ ಪುಟ್ಟ ಕಾಡು

ಬಂದ ಅತಿಥಿಗಳೆಲ್ಲ  ಬಂಧುಗಳು
ಹೆಸರು ತಿಳಿಯಲು ಇದೆಯಲ್ಲ ಗೂಗಲ್ಲು!
ಕಳಿಂಗ ಕೀಚುಗ ಪೀರ ಟುವ್ವಿ ಕಬ್ಬಕ್ಕಿ
ಕುಟ್ರ ಕವುಜಗ ಚಿಟ್ಟು ಸಿಪಿಲೆ ಸೂರಕ್ಕಿ
ಎಲ್ಲ ಹೆಕ್ಕಿಯೂ ಯಾವುದು ನಮ್ಮ ಹಕ್ಕಿ!?

ಜೋಡಿಗಳು ಹೆಣೆದ ಗೂಡಲ್ಲಿ
ಇಟ್ಟೀತೆ ಮೊಟ್ಟೆ? ಕೊಟ್ಟೀತೆ ಕಾವು?
ಒಡೆದು ಬಂದ ಮರಿ ಕೇಳೀತೆ ಗುಕ್ಕು
ಕಿವಿ ತಲೆ ಮನಸಲ್ಲಿ ಇದೇ ಗುಂಗು

ಒಳಗೆ ಮಗು ಕಿಟಕಿ ಬಳಿ ಕುಣಿದು ಚಪ್ಪಾಳೆ
ಹಕ್ಕಿ ಕಿವಿ ನಿಮಿರಿ ಚಿಲಿಪಿಲಿ
ಆಗಾಗ ಒಳ ನೋಡಿ
ಬರಲೇನು ಒಳಗೆ?
ಬದಲೇಕೆ ಹೀಗೆ? ಕೇಳೀತು
ಆಸೆಗಣ್ಣಿಂದ ಮಗುವೊಟ್ಟಿಗೆ ನಿಂತ
ಮೊನ್ನೆಯ ವ್ಯಾಧ… ನಾನು!

birds n shoe

(Pic from Google)

(Published in: http://surahonne.com/?p=27513)

ಕಟ್ಟಿದರೆಲ್ಲಿ?

donkey

ಅಲ್ಪ ಸಂಖೈಯಿದ್ದ ಕರೊನಾ ಮಂದಿ
ಬಂದರು ಬಹು ಸಂಖೈಗೆ
ಹಸಿರವಲಯದಿಂದ ಜಿಗಿತ ಕೆಂಪುವಲಯಕೆ
ಕಟ್ಟಿರೆಂದರೆ ಬಟ್ಟೆ ಮೂಗು ಬಾಯಿಗೆ
ಶುದ್ಧ-ಮುಗ್ಧ ನಮ್ಮ ಜನ!
ಕಟ್ಟಿವುದೆ ಮಾಸ್ಕು ಕಣ್ಣು ಕಿವಿ ಬುದ್ಧಿಗೆ!?

ವಿ-ಚಿತ್ರ ವಿತರಕರು

images1

 

ಚೀನಾ ಮಾಡಿತು ಊಹೆಗೂ ನಿಲುಕದ
ವುಹಾನ್ ವೈರಸ್ ಹಾರರ್‌‌ ಚಿತ್ರ
ಅದರ ಸದ್ದು ವಿಶ್ವದ ಪೂರಾ
ಬಲಿಯಾಯಿತು ಪ್ರಾಣ ಎಲ್ಲ ಕಡೆ
ತಡೆಗೆ ಇಟ್ಟರೂ ಭಾರತ ಜಾಣ ನಡೆ
ನುಸುಳಿ ವೈರಾಣು ವೇಗ ಹೆಚ್ಚಿಸಿದೆ
ವುಹಾನಿನ ವೈರಸ್‌ ವಿ-ಚಿತ್ರಕ್ಕೆ
ತಬ್ಲಿಘಿ ತಬ್ಬಿದವರೇ ವಿತರಕರೆ!?

(Pic:Google)

ಲಾಕ್‌ ಡೌನ್‌ ಮುಗಿದರೂ…

masks

ಜೀವ ತೆಗೆಯುತ್ತಿರೆ ವೈರಾಣು
ದೇಶ ವಿದೇಶಗಳೀಗ ಹೈರಾಣು
ಸಡಿಲಾದರು ಕೂಡ ಲಾಕ್ಡೌನು
ಸಡಿಲಗೊಳಿಸದಿರಿ ಮನಸನ್ನು

ಎಲ್ಲ ದೌರ್ಬಲ್ಯಗಳ ಮಾಡಿದೂರ
ನಮಗೆ ನಾವೇ ಇನ್ನಷ್ಟು ವಾರ
ಕಾಯ್ದುಕೊಳ್ಳೋಣ ಸ್ವಲ್ಪ ಅಂತರ
ಬಾಯಿಮೂಗಿಗೆ ಮಾಸ್ಕೇ ಸುಂದರ! 

(Pic courtesy:Google)

ಮಾಧ್ಯಮ-ಮರೆವು

 

JK

ಭಾಷಾ ಗಾಂಭೀರ್ಯ ತೊರೆದಿವೆಯೆ
ಮಾಧ್ಯಮ-ಪತ್ರಿಕೆಗಳು ಇಂದು!?
ಹೀಗೂ ಇರಬಹುದು ಸುದ್ದಿ ಮುಂದು
ಎಣ್ಣೆಯಂಗಡಿಯಲ್ಲಿ ತೀರ್ಥಪಾನ
ಮಾಡಿದ ಹತ್ತು ಮಂದಿ ರಸ್ತೆ ದಾಟು
ಹೋರಾಟದಲ್ಲಿ ಹುತಾತ್ಮರು!
ಹಾಕಿ ಭಾವಚಿತ್ರ, ಮಿಡಿಸಿ ಕಂಬನಿ
ನಿಜ ಹುತಾತ್ಮರಿಗೆ ʼಮೂಲೆಸುದ್ದಿʼ !

(Pic:Google)

ಶುಭಾಶಯ

May

ಶ್ರಮಿಕ ದಿನ
ದೀರ್ಘ ವಿಶ್ರಾಮದ ಕಸಿವಿಸಿ
ಬೆವರಿಗೆ ಬೆಲೆ ಬಂದಾಗ
ನಗುತ್ತಿದ್ದವನು
ದಾನಿ ಚಾಚಿದ ಕೈ
ಕಂಡು ದೀನ
ಭಾವ
ಪರಾಧೀನ

ಕಾಲುಕೈಬೆನ್ನುಗಳಿಗಾಗಿದ್ದ
ಗಾಯ ಮಾಸಿ ಹೋಗಿತ್ತು
ಹೃದಯಕ್ಕಾಗಿದ್ದೇನು
ಕಾರ್ಮಿಕನಿಗೇ ಗೊತ್ತು

ಎಂದಿಗೂ ಇದೆ ಶುಭಾಶಯ
ಕರಾಳದಿನ ಕಳೆಯಲೆನ್ನುವುದೇ
ಮಹದಾಶಯ