ವ್ಯತ್ಯಾಸ

political-clipart

ಜನರೊಡನೆ ಬೆರೆತು ಸುಖದು:ಖ ಅರಿತು
ಅಧಿಕಾರ ಹಿಡಿದನಾದರೆ ಅವನು
ಜನರ ಕಣ್ಮಣಿ ಸೇವೆ ಅವನ ಗುರಿ
ಕರೆಯಿರವನ ʼರಾಜಕಾರಣಿʼ

ಮುಖವಾಡ ಹೊತ್ತು ಮತ ಪಡೆದು
ಬೊಕ್ಕಸಕೆ ಕಣ್ಣಿಟ್ಟು ಅಧಿಕಾರ ಹಿಡಿದು
ತಾನು ಕೊಡುಗೈಯ ದಾನಿಯೆಂದು ಮೆರೆದರೆ
ಅವನು ಮಹಾ ʼಪುಢಾರಿʼ ; ಸಮಾಜ ಕುಠಾರಿ
ಮಂದಿ ಮುಗಿಸಬೇಕವನ ಅಧಿಕಾರ ಸವಾರಿ

ಮರುಗುವ ಜನ ಮರುಳರಲ್ಲ
ಉಪ್ಪು ತಿಂದವರಿಗೆ ನೀರು ಕುಡಿಸಿರೆಲ್ಲ!

(Pic courtesy: Google)

ಮುಚ್ಚುವ ಕಣ್ಣು

emiliano-vittoriosi-BEqOm2SRpMY-unsplash

“ಪ್ರಿಯೆ, ಚುಂಬಿಸಲು ಬಳಿ ಬಂದಾಗೆಲ್ಲ
ಕಣ್ಣು ಕೋರೈಸುವ ನಿನ್ನ ಪ್ರಖರ
ಶ್ವೇತ ಮುಖ ಎದುರಿಸಲಾಗದೆ
ಮುಚ್ಚುವೆ ಕಣ್ಣು”  ಅಂದ ನಲ್ಲ

“ನಿನ್ನ ಬಣ್ಣ ಕತ್ತಲೆಗೆ ಹತ್ತಿರ
ನಾ ಕತ್ತಲೆಗೆ ಹೆದರಿ ತತ್ತರ
ನೀ ಬಳಿ ಬಂದಾಗೆಲ್ಲ
ನಾನೂ ಮುಚ್ಚುವೆನು ಕಣ್ಣ”
ಅನ್ನುವುದೆ ನಲ್ಲೆ!

ಒಪ್ಪಳೆಂದೂ ಹೆಣ್ಣು ಉತ್ಪ್ರೇಕ್ಷೆ 🙂

(Pic courtesy: Pixel)

 

 

 

 

 

 

 

ಯಾರು ಹಿತವರು?

between-1815722_960_720

ಯಾರು ಹಿತವರು ಈ ಮೂವರೊಳಗೆ
ʼಬಿʼ ಯೊ, ʼಸಿʼ ಯೊ ʼಜೆʼ ಯೋ?
ಮೂವರೂ ಇರಲೆಂದರು ಜನರು
ಎಲ್ಲರಿಗೆ ಇಗೋ ಮತವೆಂದರು, ಅಯ್ಯೋ!

ಒಟ್ಟಾಗಿ ಹಿಡಿದರು ಗದ್ದುಗೆ ಸಿ-ಜೆ
ಕಿಚಡಿ ಮುಂದಿಟ್ಟು ತಿನ್ನಿರೆಂಬ ಸಜೆ
ಜಗಿಯಬೇಕಿದೆ ಜನರೀಗ ಕಲ್ಲು ಮಣ್ಣು
ಒಲ್ಲೆನೆಂದರೆ ಕೆಟ್ಟ ನಾಲಿಗೆ ಉರಿವ ಕಣ್ಣು

(Pic courtesy: Pixabay)

ದಾನಿಗಳು

Vijayavani_Bengaluru_1561720176

ಹಾಗೂಹೀಗೂ ಹಿಡಿದರು
ರಾಜ್ಯದ ಅಧಿಕಾರ ಗದ್ದುಗೆ
ಹರಿಬಿಟ್ಟರು ನಂತರ
ಅಸಹನೆ ಹರಿತದ ನಾಲಿಗೆ

ಕೊಟ್ಟರಂತೆ ಬೊಕ್ಕಸದಿಂದ
ಜನಕೆ ದಾನ ಕರುಣೆಯಿಂದ!
ಇದನು ನೆನೆಯದ ಮೂಢ(!) ಜನ
ಮೆಚ್ಚಿದರಂತೆ ಹೊಸ ನಾಯಕನ!

ಕೋಪ ಅಸಹನೆ ಬದಿಗಿಟ್ಟು
ತಿರುಗಿ ಬೇಡುವರು ಮತಭಿಕ್ಷೆ
ಕೊಡದೆ ಹೋದಿರೊ ಮತ ಮತ್ತೆ
ʼದ್ರೋಹಿಪ್ರಜೆʼ ಪಟ್ಟದ ಜೊತೆಗೆ
ಸಿದ್ಧವಿರುವುದು ಬಗೆ ಬಗೆ ಶಿಕ್ಷೆ!

(Pic from Vijayavani dt 28.6.2019)

ವಿಶ್ವಾಸ

seeding

ಈ ಬಾರಿ
ಮುಂಗಾರು ತಡವಾಗಿ
ಇನ್ನೂ ಉಳಿದಿದೆ ಬಾಕಿ
ಎರಚೆ ನವಣೆ ಸಜ್ಜೆ ರಾಗಿ

ಬರ ಬರುವ ಸೂಚನೆ
ಎಲ್ಲರೆದೆಯಲೆಬ್ಬಿಸಿದೆ
ಭಾರೀ ಹುಯಿಲು…
ಪ್ರಕೃತಿ ಸಲಹುವಳವಳು
ಈ ಬಾರಿಯೂ  ತಪ್ಪಿಸಳು
ರೈತಮಾಡುವ ಕುಯಿಲು

(Pic from Google)

ಎರಡೇ ಕ್ಷೇತ್ರ

cartoon

ನಿಟ್ಟುಸಿರು ಬಿಟ್ಟಿತೆ ರಾಜ್ಯ ಸರ್ಕಾರ?
ಜನಸೇವೆಗಿನ್ನು ಉಳಿಸಿಕೊಂಡಿತೆ
ಎರಡೇ ಲೋಕಸಭಾ ಕ್ಷೇತ್ರ!

ತಮಗೆ ಬಿಟ್ಟು ಬೇರಾರಿಗೋ
ಮತ ಹಾಕಿದವರು
ಬಾಯ್ಬಿಟ್ಟರೆ ಇನ್ನುಮುಂದೆ ತಕರಾರು
ಬೆನ್ನಿಗೆ ಬರೆ ಎಳೆಯುವ
ಕಾನೂನು ತಂದಾರು ಹುಷಾರು!

(Pic courtesy:google)

 

ಎಲ್ಲಿ ಮಳೆ?

alina-unsplash

ಕಳೆದ ವರುಷ ರಾಜ್ಯದುದ್ದಗಲ
ಧಾರೆಯಾಯಿತು ವರ್ಷಾ
ಎಲ್ಲ ಕೆರೆಕಟ್ಟೆ ಅಣೆಕಟ್ಟೆ
ತುಂಬಿಹರಿದು ಹಸಿರಲಿ ಹಾರಿತು ಚಿಟ್ಟೆ

ಈ ವರ್ಷವೇನಾಯಿತೋ !?
ಬೀಸಿದೆ ಒಣಹವೆ
ಎಲ್ಲಕಡೆ ಬಿರುಕುಬಿದ್ದ ಕೆರೆಗದ್ದೆಹೊಲ
ಬರಿದೆನಿಸಿದೆ ಬಡ ರೈತನ ಹೊಟ್ಟೆ

(Pic courtesy Unsplash)

ಗ್ರಾಮ ವಾಸ್ತವ್ಯ

salary-MLA-in-India

ಮಂತ್ರಿಗಳ ಗ್ರಾಮ ವಾಸ್ತವ್ಯ
ಖಂಡಿತ ಉಪಯೋಗ ಅನೇಕ
ನಗರ ರೇಜಿಗೆಯಿಂದ ಭಾರೀ ನಿರಾಳ
ಒಳ್ಳೆಯ ಗಾಳಿ ಬೆಳಕು
ಅಲ್ಲೆ ಬೆಳೆದ ತರಕಾರಿ ಸೊಪ್ಪು
ಕರೆದ ನೊರೆ ಹಾಲು
ಕಲಬೆರಕೆ ರಹಿತ ಊಟದ ಹಿತ

ನಂತರ ಆಲಿಸುವುದು ಮುಗಿಬಿದ್ದ
ಮಂದಿಯ ಮುಗಿಯದ ಅಹವಾಲು
ಪತ್ರಿಕೆಗಳಿಗೆ ಖರ್ಚುಲೆಕ್ಕದ ಗೀಳು
ವಾಸ್ತವಕ್ಕೆ ಕನ್ನಡಿ ಹಿಡಿಯುವ ಸವಾಲು

(Pic courtesy:Google pics)

ವಂಚಿತರು

fox

ನಿತ್ಯವೂ
ಪತ್ರಿಕೆಗಳ ಮುಖ್ಯ ಸುದ್ದಿಗಳು ಮೂರು –
ಒಂದು ತಿಂಗಳಿನಿಂದ ಮಳೆಮೋಡಗಳ ಕಾಣೆ
ಮೂರು ತಿಂಗಳಿಂದ ಹಣಹೊಡೆದ ಮನ್ಸೂರ ಕಣ್ಮರೆ
ವರ್ಷಪೂರ್ತಿ ಮೈತ್ರಿಧರ್ಮಪಾಲಕರ ಆಟ ಕಣ್ಣಾಮುಚ್ಚೆ !!

(Pic courtesy: Pixabay)