ಶಾಂತಿ ಮಂತ್ರ

learning

ಆಶ್ರಮದ ಶಿಷ್ಯಗಣ
ವೇದಾಭ್ಯಾಸ
ನಿತ್ಯ ಶಾಂತಿ
ಮಂತ್ರ ಪಠಣ

ಕೊನೆಗೆ ಗುರು ಆರಿಸಿದ
ಶಿಷ್ಯನೊಬ್ಬನ
ಉಳಿದೆಲ್ಲರಿಗೆ ತಿಳಿಸಿದ
“ಇವನುಚ್ಛರಿಸುವ
ಶಾಂತಿ ಮಂತ್ರ
ಕರ್ಣಾನಂದ
ಇವನೆ ಸರಿ ದೂತ
ಹೋಗಲಿವ ಅಮೆರಿಕ
ಹೊಂದಲಿ ಡಾಲರ್‌ ಸುಖ”

ಶಿಷ್ಯರೊಳಗೆ ತಳಮಳ
ಅಸಹನೆ ಗಲಾಟೆ ಕ್ರೋಧ
ಮೀರಿ ಮಿತಿ ಗುರು ಹೈರಾಣ

ಇದೀಗ ಶಿಷ್ಯಗಣಕ್ಕೆ ಪುನರಪಿ
ನ ಕ್ರೋಧ
ನ ಮಾತ್ಸರ್ಯ
ನ ಲೋಭ
ಶಾಂತಿ ಮಂತ್ರ ಉಪದೇಶ
ಇದರ ಅನುಷ್ಠಾನ ಹೇಗೆ?
ಬಿಡದ ಚಿಂತೆ ಗುರುವಿಗೆ!

(Pic courtesy:Internet)

 

ಇಪ್ಪತ್ತು-ಇಪ್ಪತ್ತು

calendar

ಸಮ ಚಿತ್ತ ಸಮ ನಡಿಗೆ
ಸಮ ದೃಷ್ಟಿಗೆ
ಸುಖ ದು:ಖ ನೆಲ ಬೆಟ್ಟ
ನಗೆ ಅಳುವಿಗೆ
ಚೌಕಗಳ ತುಂಬಾ
ರಾತ್ರಿ ಹಗಲು
ಗ್ರಹತಾರೆಚಂದ್ರ
ರಾಹುಕೇತು
ಗುಳಿಕ ಯಮಗಂಡ
ಕಾಲ ಹೊತ್ತು
“ಇಪ್ಪತ್ತು-ಇಪ್ಪತ್ತು”
ಸಂಖ್ಯೆ ಹೊತ್ತು
ಗೋಡೆ ಮೊಳೆಯಲಿ
ತೂಗು ಕ್ಯಾಲೆಂಡರು!

ಹೊಸವರ್ಷವೂ ಉಸುರಿದೆ
ನಡೆ ದುಡಿಮೆಗೆ
ಕಾಲ್ಚಾಚೆ ಇಟ್ಟಿರುವೆ
ರಜೆಯ ಕೊಡುಗೆ