ಹೋಲಿಕೆ

11

ಅಂದು:
ಕರಿಮೋಡಗಳನ್ನು
ನಿನ್ನ ಕೇಶಕ್ಕೆ ಹೋಲಿಸಿ
ಕವಿತೆ ಬರೆದಿದ್ದೆ
ಓದಿ ನೀ ಕಣ್ಣಲ್ಲಿ ಮಿಂಚು ಹರಿಸಿ
ನಾಚಿ ನೀರಾಗಿದ್ದೆ

ಇಂದು:
ಅದೇ ಕೇಶರಾಶಿ
ಬಿಳಿ ಮೋಡಕ್ಕೆ ಹೋಲಿಸಿ
ಕವಿತೆ ಬರೆದೆ
ನೀನು ಓದಬಾರದಿತ್ತು:
ಈಗ ಅಡುಗೆಮನೆಯಲ್ಲಿ
ಪಾತ್ರೆಗಳ ಗುಡುಗಿನ ಸದ್ದು !

(ಚಿತ್ರ ಕೃಪೆ:ಅಂತರ್ಜಾಲ)

ಮೊಳ ಮಾರು ಹೂ

flowers

 

 

 

 

(ಹನಿಗವನಗಳು)

ಎರಡು ಮೊಳ ಹೂ
ಕೊಳ್ಳಬೇಕೆಂದಾಗಲೇ
ಹೂ ಮಾರುವವಳ ಕೈ
ಅವಳ ಬೆರಳ ಉದ್ದ
ಹೆಚ್ಚಿರಲೆಂದು ಆಸೆಯ
ಲೆಕ್ಕ ಹಾಕುವುದು

’ಯಾರೊಬ್ಬರೂ ಹೂ
ಕೊಳ್ಳಬರುತ್ತಿಲ್ಲ’
ಹೂ ಮಾರಲು ನಿಂತ
ತೀರಾ ಗಿಡ್ಡ ಹುಡುಗಿ
ದೂರುತ್ತಿದ್ದಳು !

’ನಿನ್ನ ಮಗಳೇಕೆ ಬರಲಿಲ್ಲ
ಹೂ ಮಾರಲು’ ಅಂತ
ಕೇಳಿದ್ದರ ಕಾರಣ
ಒಳ್ಳೆ ಎತ್ತರದ ಆ ಮಗಳ
ಉದ್ದ ಕೈ ಮತ್ತು ಬೆರಳು

jasmine1

ಮನೆಯೊಳಗೆ ಗೊಣಗಿನ ಸದ್ದು:
’ಎರಡು ಮೊಳವಿಲ್ಲದ
ಈ ಗಿಡ್ಡ ಹುಡುಗಿಯ ಹೂ
ಮೊಳಕ್ಕೆ ಮೂವತ್ತಂತೆ’

ಹೂವು …ಹೂವು… ಅಂತ
ಹೂ ಮಾರುವ ಹುಡುಗಿ
ಕೂಗಿ ಕೂಗೀ
ಅವಳೀಗ ಚೆಲ್ವ ಕೋಗಿಲೆ !

ಬೇಸಿಗೆಯ ಬಿರು ಬಿಸಿಲಿಗೆ
’ಬಾಡಿದ ’ ಹೂಗಳ ಯಾರೊ
ಚರ್ಚಿಸದೆ ಚೌಕಾಶಿಸದೆ ಕೊಂಡರು
ಮಾರುವವಳು ’ ಅರಳಿದಳು ’

jasmine1

ಹೂ ಮಾರುವವಳ
ಒಂದೇ ಮುನಿಸು…
ಗಂಡ ಎಂದೂ
ತನಗಾಗಿ ಹೂದಂಡೆ
ತಂದು ಮುಡಿಗಿರಿಸದಿರುವುದು

ಕೇಳಿದೆ
’ಹೂವಿನೊಟ್ಟಿಗೆ ಮತ್ತೇನಾದರು
ವ್ಯಾಪಾರ ಮಾಡಬಹುದಲ್ಲ? ’
’ನನಗೆ ಒರಟು ವ್ಯಾಪಾರ
ಒಗ್ಗದು’ ಅಂದಳು

ಅವಳು ಮಾರು ಅಳತೆಗೆ
ಬಾಹು ತೆರೆದಳು
ಹುಡುಗ ಡವಢವಿಸಿ ಕಕ್ಕಾಬಿಕ್ಕಿ

೧೦

ನನ್ನವಳು ಹೂಗಿತ್ತಿಯ ಕೇಳುತ್ತಿದ್ದಳು:
ಒಂದೊಂದು ಹೂವನ್ನೂ
ಮಾರು ದೂರ ಕಟ್ಟಿದ್ದೀಯಲ್ಲ
ಕೊಳ್ಳುವುದು ಯಾವ ಲೆಕ್ಕದಲ್ಲಿ

೧೧

’ ದಾರವಷ್ಟೆ ಕಾಣುವ
ಈ ಹೂ ಮಾಲೆ
ದೇವರಿಗೆ ಜನಿವಾರವೇನೆ!? ’
ಮಡದಿ ದಬಾಯಿಸುತ್ತಿದ್ದಳು

jasmine1

೧೨

ಮಾರಿ
ಗುಡಿ ಬಳಿ
ಹೆಣ್ಣು ಜೀವನ ಹೂ
ಮಾರಿ

(ಚಿತ್ರ ಕೃಪೆ: ಅಂತರ್ಜಾಲ)