ಶ್ರೀ ವಿಶ್ವೇಶತೀರ್ಥರು

vishve

ವಿಶೇಷದಲ್ಲಿ ವಿಶ್ವೇಶ
ಪೇಜಾವರ ಪೀಠಾಧೀಶ
ಅದಕ್ಕಿಂತಧಿಕ ಗುರಿ
ʼಗರಿಮೆ ಮುಟ್ಟಲೀ ನೆಲಶೇಷʼ
ಕೃಶ ದೇಹಿ ವಾಮ ʼನʼ ಕಾರ
ವೈದಿಕವಿಚಾರ ಕೃಷಿಕ
ಉತ್ತು ಉಳಿಸಿದ ಉತ್ತುಂಗ
ವೈವಿಧ್ಯತೆಗತಿ ಸಹಮತ
ವೈಚಿತ್ರ್ಯಗಳ ಮನಗಳಿಗೂ
ದನಿಯಾಗುವ ತವಕ
ಕುಹಕಕ್ಕೆ ನಗೆಯುತ್ತರ
ನಗೆಗೆ ನಲುಮೆ ಬಿತ್ತರ
ಮುಗಿಲೆತ್ತರ ವಿಶ್ವಾಸ
ಅದರಾಚೆ ಚಾಚಿದ
ಎಲ್ಲರೊಟ್ಟಾಗಿಸಿ ʼಮುಡಿʼ
ಕಟ್ಟುವ ಹುಲ್ಲ ಹಗ್ಗ
ದೇಹತೊರೆದಾಚೆಗೂ ಗೋಚರ
ಪರಂಪರಾದೇಶ ಎಸಕ ಸಂಕಲ್ಪ

 

(Pic courtesy:Bhootaraja Publications)

ತೆರೆದ ಬಾಗಿಲು

Open door

ನೀನೆನ್ನ ಜೀವನದೊಳಬರಲು
ಬಯಸುತ್ತಿರುವೆಯೇನು?
ತೆರೆದಿದೆ ಬಾಗಿಲು
ಇದೋ ಸ್ವಾಗತ…

ನೀನೆನ್ನ ತೊರೆದಾಚೆ ಹೋಗಲು
ಹಪಹಪಿಸುತ್ತಿರುವೆಯೇನು?
ತೆರೆದಿದೆ ಬಾಗಿಲು
ಇದೋ ವಿದಾಯ…

ಆದರೊಂದು ಬೇಡಿಕೆ
ನಿಲ್ಲದಿರು ಬಾಗಿಲ ನಡು
ಸಹಮನಸ್ಕರ ಸಂಚಾರಕ್ಕೆ
ಅಡ್ಡಿ ಮಾತ್ರ ಮಾಡದಿರು!

(ಭಾವಾನುವಾದ)

ಎಚ್‌ ಎಸ್‌ ವಿ

hsv

ಅಖಿಲ ಭಾರತ
ಸಾಹಿತ್ಯ ಸಮ್ಮೇಳನಕ್ಕೆ
ಜನರಿಗೆ ಸಿಕ್ಕಿತು
ʼಎಚ್‌ಎಸ್ವೀʼ ಟ್ ಸುದ್ದಿ

ಸಂತಸವೇಕೆಂದರೆ
ಸಾಹಿತ್ಯ ಪ್ರಿಯರಿಗೆ
ಹೆಚ್ಚು ʼಎಚ್ಎಸ್ವೀʼ ಕಾರವಾದ ಬಗೆ!

85 ನೇ ಕನ್ನಡ ಸಾಹಿತ್ಯ ಸಮ್ಮೇಳನ
75 ರ ಹರೆಯದ ಎಚ್ಚೆಸ್ವಿ ಸಮ್ಮೋಹನ
ಕಲ್ಬುರ್ಗಿಯಲ್ಲಿ ಬೀರುವುದ ಕಾಣೋಣ

(Pic:Internet)