ಜಗ ವಂದ್ಯ

 

pexels-photo-289358

’ಅವನು’
ದಿಕ್ಕು ಬದಲಿಸುವಾಗ
ಬದಲಿಸಿ ಸಾಗುತ್ತಲೇ ಇರುವಾಗ
ಹೆದರದಿದ್ದೀತೆ ಜಗ!

ದಕ್ಷಿಣವನು ಮುಟ್ಟಿದಾಗ
ಮುಂದೆ ಸಾಗಿಬಿಟ್ಟಾನೆಂಬ
ಭಯದುದ್ವೇಗ!

ಮುಂದೇನು?
ಅಂತ್ಯವಾದರೆ ಯುಗ!

ಅವನು
ಅವನಿಯ ನಲ್ಲ
ಬಿಡಲೊಲ್ಲ!

ಜಾಡ ಹಿಡಿದ
ಹಿಂತಿರುಗಿದ
ಹಿಮ ಕರಗಿಸುತ್ತ
ಮೋರೆ ಬೆಳಗಿಸುತ್ತ

ಅದೇ ಸಂಕ್ರಮಣ
ಪಥ ಬಿಡದ ಚಲಿತ
ಜನ ಹಿತನು
ಜಗ ಹೃದಯನು
ಮಿಗಿಲ ವಂದ್ಯನು
ಸಂಕ್ರಾಂತಿ ಪುರುಷನು

(Pic courtesy: Pixel)

Advertisements

ಮುಚ್ಚಿದ ಬೊಗಸೆ

new-years-eve-585922_960_720

ಎರಡು
’ಸಾವಿರದ’
‘ಹದಿ-ನೆಂಟೆ’
ಸುರಿದು ಸುಖ ದು:ಖ
ನಿರ್ಲಿಪ್ತ ಸರಿ-ದೆ …..

ಇದೀಗ
ಎರಡು ಸಾವಿರದ
ಹತ್ತೊಂಭತ್ತು –
ತೆರೆ ಸರಿಸಿ
ಮುಚ್ಚಿದ ಬೊಗಸೆ …..

ಬಾ ಹೊಸತೆ
ಕೊಡು
ಭರವಸೆಯ ಬತ್ತಳಿಕೆ
ನೀಡು
ಆಸೆಗಳಿಗಾಸರೆ
ಹೂಡು ಭಾಗ್ಯ
ಗುರಿಯಿಡು
ನೊಂದವರ
ಬದುಕ ಬಾಗಿಲಿಗೆ
ಈಡಾಡು ಬೆಳಕೆ …..

ಮುಗಿಬೀಳಲಿ
ಮಿಗಿಲಿಲ್ಲದ ಹರ್ಷ
ಅದಕ್ಕಿರಲಿ ಗುರಿ
ಮುಗಿಲೆ!

(ಚಿತ್ರ ಕೃಪೆ:Pixabay)