ಸೈನಿಕನ ಸಂದೇಶ

 

soldier

ಗೆಳೆಯಾ….

 

ಗಡಿಯಲ್ಲಿ ನಾನು ಕಾದುತ್ತಾ ಸಾವನಪ್ಪಿದೆನಾದರೆ

ನನ್ನ ದೇಶದ ಧ್ವಜದಿಂದ ದೇಹ ಮುಚ್ಚು

ನನ್ನ ಮನೆಗದನ್ನು ಕಳುಹಿಸಿಕೊಡು…

 

ನನ್ನೆಲ್ಲ ಪಾರಿತೋಷಕಗಳ ಎದೆಗಿಟ್ಟು ಅಲಂಕರಿಸು

ಅವಳು ಕನಸಿದ ಶ್ರೇಷ್ಠತೆಯ ಗುರಿ ಮುಟ್ಟಿದೆನೆಂದು

ನನ್ನ ತಾಯಿಗೆ ಮನದಟ್ಟು ಮಾಡು…

 

ಯೋಚನೆಯಲಿ ತಲೆ ತಗ್ಗಿಸಬೇಕಿಲ್ಲವೆಂದು

ನನ್ನ ತಂದೆಗೆ ತಿಳಿಸಿಬಿಡು

ನನ್ನಿಂದ ಇನ್ನೆಂದೂ ಚಿಂತೆ ಉದ್ವೇಗಗಳಿಲ್ಲವೆಂದು

 

ತಮ್ಮನಿಗೆ ತಿಳಿಹೇಳು, ಓದಿನತ್ತಲೆ ಗಮನವಿಡಲು

ಮತ್ತು ನನ್ನ ಬೈಕಿನ ಕೀ ಅವನಿನ್ನು ನನಗೆ

ಹಿಂತಿರುಗಿಸುವ ಅಗತ್ಯವಿಲ್ಲವೆಂದು…

 

ದು:ಖಿಸದಿರೆಂದು ತಂಗಿಗೆ ತಿಳಿಸು

ಅವಳ ಅಣ್ಣ ಸೂರ್ಯಾಸ್ತಮಾನದಾಚೆಯ

ದೀರ್ಘ ನಿದ್ರೆಗೆ ಜಾರಿರುವನೆಂದು…

 

ಸಣ್ಣ ಮಗುವಿನ ಜೊತೆಯ ನನ್ನ ಪತ್ನಿಗೆ

ಕ್ಷಮಿಸಬೇಕೆಂದು ಪ್ರಾರ್ಥಿಸಿಬಿಡು

ಅಳುವ ಮಗುವಿಗೆ ಸಾಂತ್ವನ ಅವಳಿಂದಲೆ ಇನ್ನುಮುಂದು…

 

ದು:ಖಿಸದಿರಲಿ ನನ್ನ ದೇಶ ಬಾಂಧವರು

ಏಕೆಂದರೆ ಸೈನಿಕನ ಹುಟ್ಟಿರುವುದು

ಗಡಿಕಾಯುತ್ತ ಸಾವಿನಲ್ಲಿ ವಿರಮಿಸಲು..

 

(ವಾಟ್ಸಾಪಿನಲ್ಲಿ ಬಂದ ಆಂಗ್ಲ ಕವಿತೆಯ ಭಾವಾನುವಾದ)    

 

 

Advertisements

ಹನಿ-ಧ್ವನಿ – ೨

ghatbandhanಕಳ್ಳ

ದೇಶ ಕಾಯುವವನು ಕಳ್ಳ
ಅಂತ ನಾಯಕರೊಬ್ಬರ
ಅಂಬೋಣ

’ನಿಜ ನಿಜ! ಪ್ರಜೆಗಳ
ಹೃದಯ ಕದ್ದವನು ಕಳ್ಳ!’
ಅನ್ನುತ್ತಿದೆ ಜನಗಣ!

ಪ್ರೇಮಕತೆಯಲ್ಲ

’ಕಣ್ಣಲ್ಲಿ ಕಣ್ಣಿಟ್ಟು ನೋಡನು
ನನ್ನೊಡನೆ ಮಾತಾಡನು
ಸ್ನೇಹದಿಂದ ಅಪ್ಪಿಕೊಳ್ಳನು’
ನಾಯಕರೊಬ್ಬರ ನಿತ್ಯಾಲಾಪ…

ಛೆ…ಛೆ
ಇದು ಪ್ರೇಮಕತೆಯ ಸಲ್ಲಾಪವಲ್ಲ
ಯುವರಾಜ-ಕಾರಣಿಯ
ಪ್ರಧಾನ ಸೇವಕನ ಬಗೆಗೆ ಆರೋಪ!

ಭೀತಿ

”ಮಹಾಘಟಬಂಧನ’
ಪತ್ರಿಕೆಗಳಲ್ಲಿ ನಿತ್ಯ ಹೇಳಿಕೆಗಳ ಸುದ್ದಿ…
ನಾಯಕರುಗಳಲ್ಲಿ ಯಾಕಿಷ್ಟು
‘ಬಂಧನ’ ದ-ಭೀತಿ!

ಜೋ-ಸರ್ಕಾರ

ಯಾರದೋ ಪ್ರಶ್ನೆ
’ಜೋಕರುಗಳೂ ಆಳುತ್ತಾರಾ?’
ಅದಕ್ಕೊಂದೇ ಉತ್ತರ
’ಕಾಣುತ್ತಿಲ್ಲವೇ ಆಪ್ ಸರ್ಕಾರ?!’

ಹೊಸ ಅಜೆಂಡಾ

ರಾಜ್ಯದಲ್ಲಿ ಮೈತ್ರಿ ಸರ್ಕಾರದ್ದು
ಒಂದೇ ಅಜೆಂಡಾ…
ವಿರೋಧ ಪಕ್ಷಕ್ಕೆ
ನಿತ್ಯವೂ ಹೊಸ ಹೊಸ ಬೈಗುಳ!

ಕಾಣುವ ಲೋಕ

ಯಾರೂ ದೇವಲೋಕ ಕಂಡಿಲ್ಲ
ಹಾಗಾಗಿ ಅದನ್ನು ವರ್ಣಿಸಲಾಗುವುದಿಲ್ಲ
ಮರ್ತ್ಯಲೋಕವನ್ನು ವರ್ಣಿಸಬೇಕಿಲ್ಲ
ಈಗ ಅನುಭವಿಸುತ್ತಲೇ ಇದ್ದೇವಲ್ಲ!

(Pic from Google pics)

ಮಾಸದಿರಲೀ ನಗೆ

IMG-20190203-WA0027

ಇವನಾರವ ಚತುರ!
ಮೆಟ್ಟಿದುದನ್ನೇ ಮುಖಕ್ಕಿಟ್ಟು
ಚೇಷ್ಟೆ ನಟಿಸುವವ…
ಅವನ ಹಿಂದೆ
ಚತುರಂಗದಳ…
ಸ್ವಯಂ ಚಿತ್ರಣಕ್ಕೆ
ಧರಿಸಿದ್ದಾರೆ ಮಾಸದ
ಅಭೂತಪೂರ್ವ ನಗೆ

ಈ ನಗೆಯ ಸಂದೇಶ
ಬಲಿತ ನಮ್ಮೆಲ್ಲರಿಗೆ
“ಹಿಂದು ಮುಂದುಗಳ ಚಿಂತೆ ಒಗೆ
ಆನಂದ ಕ್ಷಣಗಳ ಬಗೆ ಬಗೆ –
ದು ಇರಲಾರಿರಾ ನಮ್ಮ ಹಾಗೆ!”

(Photo: Received through Whatsapp message-Thanks to the photographer)