ಕವಿಗಳ ನೆನಪು

ಭಾವಗಳ ಬರವಿಲ್ಲದ
ಬರವಣಿಗೆಯ ಬಲ್ಲಿದ
ಭಾವನೆಗಳ ಮೆರವಣಿಗೆ
ಅನಾವರಿಣಿಸಿದ
ರಸ ಋಷಿ ‘ಕುವೆಂಪು’ ವ ನೆನಪಿಸಿದ
ಮಹಾ ಕವಿ ರವೀಂದ್ರರಿಲ್ಲಿ
ಕಲಾಕ್ಷೇತ್ರದ ಅಂಗಳದಲ್ಲಿ!

(೨೯.೧೨.೨೦೨೦ ಕುವೆಂಪು ಜನ್ಮದಿನದಂದು
ರವೀಂದ್ರ ಕಲಾಕ್ಷೇತ್ರದಲ್ಲಿ ನಿಂತ ನೆನಪಿಗೆ)

ಬೆಂಗಳೂರಲ್ಲಿ ಮಳೆ

ಈ ನವಂಬರಿನ ಮಳೆ
ಹೊರಲಾಗದೇ ಭಾರ
ಇನ್ನಾಗದು ಎಂದು ಕಣ್ಣೀರಲ್ಲಿ
ವಿಧಿಗೆ ಹಳಿದು ಸುರಿದ ಹಾಗೆ

ಪ್ರೀತಿಯ ಹುಡುಗ
ಅಚಾನಕ ಮುನಿಸುಗೊಂಡು
ಒರಟು ಮಾತುಗಳ ಸುರಿದು
ನಲ್ಲೆ ಮನಕ್ಕಿರಿದ ಹಾಗೆ

ತೆಕ್ಕೆಯಲಿ ಮಗು ಅಳದೆ
ನಗದೆ ತುಂಟಾಟವಾಡದೆ
ಮೊಲೆಯುಣದೆ ಬಿಕ್ಕಿ 
ತಾಯಿ ಕರುಳ ಹಿಂಡಿದ ಹಾಗೆ

ವೈರಾಣು ಕಲೆತು
ಮೋಡಗಳಲ್ಲಿ ಮಲೆತು
ಮನುಜನೆದೆಮೇಲೆ ಮೊರೆವ
ಸಾವ ಭಯದ ಹಾಗೆ

ಏಕೆ ಮಳೆಯೇ ನವಂಬರದಲಿ ಸುರಿವೆ
ಹಿಮ ಸುರಿವ ಹೊತ್ತಿನಲಿ ಅ
ಕಾಲವೆನಿಸುವೆ!