ಹೊಸ ದೂರು

complain

ಇದೀಗ ಚಿತ್ರಮಂದಿರದವರು
ಮೆಗಾ ಧಾರಾವಾಹಿ ಟಿವಿಗಳು
ಮತ್ತು ದೊಡ್ಡ ಮಾಲ್‌ ಮಾಲೀಕರು
ಹತ್ತಿದ್ದಾರೆ ಕೋರ್ಟು
ನಿಲ್ಲಿಸಿ ವಿಧಾನಸಭೆಯ ನೇರಪ್ರಸಾರ
ಎಂಬ ಅಹವಾಲು

ಮಂತ್ರಿ-ಶಾಸಕರು ಸದನದಲ್ಲೆ ತೋರುತ್ತಿದ್ದಾರೆ
ಅದ್ಭುತ ನಟನೆ ಮತ್ತೆ ಸಸ್ಪೆನ್ಸು ತ್ರಿಲ್ಲರು ಹಾರರು
ಎಡೆಬಿಡದೆ ನೋಡುತ್ತಿರುವ ಜನರು
ನಮ್ಮನ್ನು ನಷ್ಟಕ್ಕೆ ದೂಡಿದ್ದಾರೆ ಎಂಬ ದೂರು!

 

(Pic courtesy: Google images)

ಶೂಟರ್‌

shoot2

ನಿನ್ನೆ ಸದನದ ಕಲಾಪ:
ಒಬ್ಬರು ಪಿಸ್ತೂಲು ಮಾದರಿ
ಬೆರಳ ತಲೆಗೆ ಗುರಿ
ಮಾಡಿ ಗುಡುಗಿ
ದೂರಿದರು ಭಾರೀ…
ತಕ್ಷಣ ಹೊಳೆಯಿತು
ಮೈತ್ರಿಯ ಟ್ರಬಲ್ಲು
ಮತ್ತೆ ಶೂಟರು
ಇವರಲ್ಲದಿನ್ನಾರು!

 

(Pic : Google)

ಕುರ್ಚಿ ಬಿಡೆ

IMG-20190719-WA0005
ಆಡಳಿತ ರುಚಿ ಸವಿದವರಿಗೆ ಅತಿ ಬುದ್ಧಿವಂತಿಕೆ
ಇಲ್ಲದಿದ್ದರೂ ಬಹುಮತ ಅಂಟಿರುತ್ತಾರೆ ಕುರ್ಚಿಗೆ
ಕಾಯುತ್ತಾರೆ ಆಸೆಯಲಿ ಹೋದವರು ಮತ್ತೆ ಬಂದಾರೆ ?
ಅಲ್ಲಿವರೆಗೆ ಓತಪ್ರೋತ ಮಾಡುತ್ತ ಬರಿ ಭಾಷಣ
ಬಡಿದಂತೆ ಮಾಡುವರು ನ್ಯಾಯಾಲಯದ ಬಾಗಿಲ
ಕೋರ್ಟಿನ ಕಿವಿಗೆ ಮೆಲ್ಲಗೆ ಹೂಮುಡಿಸುವ ಹಂಬಲ!
ಅಧಿಕಾರವಿದ್ದಷ್ಟೇ ಸಮಯದಲಿ ಸ್ವಕಾರ್ಯದ ಚಪಲ
(Pic: Google)

ಮುಚ್ಚಿಡು

po

ನಿರ್ಗಮನದ ಬಾಗಿಲಲ್ಲಿರುವವರು
ಆಗಮನದ ಹವಣಿಕೆಯಲ್ಲಿರುವವರು
ಇಬ್ಬರೂ ನಡೆಸಿದ್ದಾರೆ ಪೂಜೆ ಜೋರು
ಪ್ರಾರ್ಥನೆ ಹೀಗಿರಬಹುದು ಚೂರು
ಒಂದೆಡೆ ʼಮಾಡಿದ ಹಗರಣಗಳ ಬಚ್ಚಿಡುʼ
ಇನ್ನೊಂದೆಡೆ ʼಮಾಡಲಿರುವ ಹಗರಣ ಮುಚ್ಚಿಡುʼ

 

(Pic:Google)

ಕೆ.ಟಿ.ತಿಮ್ಮಯ್ಯ ಮೇಷ್ಟ್ರು

 

ktt pic

ಕಗ್ಗಂಟು ಪಾಠಗಳ ಎಳೆಎಳೆಯ ಬಿಡಿಸಿ
ಮನಸಿಗಡರಿಸುವ ಸೊಬಗು
ಎಳೆಗರುವ ಸಂತಯಿಸುವಂತೆ
ನಿಮ್ಮ ಬೋಧನೆಯ ತಂಪಾದ ಹರಿವು

ತುಂಟಾಟಗಳ ವಯಸಿಗರಂದು
ನಮ್ಮನೋಡಿನಕ್ಕ ನಿಮ್ಮ ಮಕ್ಕಳಾದೆವು
ಅಗಾಧ ವಿಷಯಗಳ ಇನಿತಿನಿತೆ ತಿನಿಸಿ
ಹೆಮ್ಮರವಾಗಿಸುವ ಬಯಕೆ ಹೊತ್ತ ನೀವು

ಬಲಿತೆವೇನು ಈ ಆಮಿಷದ ಜಗದಲ್ಲಿ!
ಕಲಿತೇವೇನು ನಿಮ್ಮ ಸುಸ್ವರದ ಪಠಣ?
ಏನಿಲ್ಲದಿರೆ ಸರಿಯೇ, ಇರಿ ನೀವು ನೆನಪಲ್ಲಿ
ನಮ್ಮ ತೆವಳಿಕೆಯಲ್ಲಿ ಹರಿಸಿರಿನಿತು ಚೇತನ

ತೊಂಭತ್ನಾಲ್ಕು ವಸಂತ ಮುಗಿಸಿ
ತ್ಯಜಿಸಿದಿರಿ ಭವ; ಹಾರಿದಿರಿ ಗುರಿಯೆಡೆಗೆ
ಎಂದಿನಂತೆಯೆ ಅದು ನಮಗೆ ತಿಳಿಯಲಿಲ್ಲ!
ಈಗ ಸಂವಹನ ನಿಂತು ತಿಳಿಸುವವರಿಲ್ಲ!

ನಮ್ಮ ನಡಿಗೆಯ ಭಾರ ಎಂದಿಗೂ ನಿಮ್ಮದೇ
ನಡೆನುಡಿ ಸವಿಯಾದರೆ ಅದು ನಿಮ್ಮ ಕಾಣಿಕೆ
ನಮನವೆಂದಿಗೂ ನಿಮಗೆ ಮತ್ತೆ ಪೂರ್ಣತೆಗೆ
ಶರಣೆಂದೆ ತೈಲವೆರೆದು ತಮವ ದೂಡಿದವಗೆ

ನಿಮ್ಮ ನೆನೆಯದ ದಿನವಿದೆಯೆ ನನಗೆ ?!
ಅರಿವಿನ ಮೊಳಕೆಗೆ ನೀರೆರೆದವರು ನೀವೇ
ಗುರುವೆ…

ಮರೆತವರು

run

ದಿನವೂ ಸಚಿವರುಗಳದು ಸಾಗಿದೆ
ಶಾಸಕರ ಮನೆಯಲ್ಲಿ ಮನವೊಲಿಕೆ
ಕೆಲವರು ಹಣೆಬರಹ ತಿಳಿಯೆ
ಜ್ಯೋತಿಷಿಗಳ ಮನೆ ಮನೆಗೆ
ಮತ್ತೆ ಕೆಲವರದು ʼಟೆಂಪಲ್ ರನ್ನುʼ
ತಪ್ಪಿಯೂ ಹೊರಳಿಸರು ಒಬ್ಬರೂ
ಮತವಿತ್ತು ಗೆಲ್ಲಿಸಿದ ಜನರತ್ತ ಕಣ್ಣು‌ !

(Pic courtesy: Shantkumar – Google)

 

ಒತ್ತಿ ಕರೆಯದಿರಿ

Sha

ರಾಜ್ಯದ ಆಡಳಿತ ಪಕ್ಷದವರಿಗೆ
ಇದೋ ಪುಟ್ಟ ಸಲಹೆ:
“ಮಿತವಾಗಿ ಕರೆಯಕೊಡಿ
ಶಾಸಕರ ಒತ್ತಿ ಮಾತ್ರ ಸೆಳೆಯದಿರಿ
ಒತ್ತು ʼಅಮಿತʼವಾಗಿ ಮತ್ತೆ
ಅವರು ʼಶಾ-ಸಖʼರಾದಾರು ಜಾರಿ !”

 

(Pic from Google)

ಹೊಸದೊರೆಗಳು ಬಂದರೆ?

l

ash

ನಿಂಬೆ ಗಜನಿಂಬೆಗಳು
ಹೋಗಲಿದ್ದಾವೆಯೆ!
ಜನತೆ ಹೊಸದನ್ನು
ನೋಡಲಿದ್ದಾರೆಯೆ?

ಕುಂಬಳ ಬೂದುಗುಂಬಳು
ಸದ್ಯದಲ್ಲಿ ಬರಲಿಕ್ಕಿದೆ!
ಮೌಢ್ಯ ಬಿಡದ ನಾಯಕರ
ಮಂದಿ ನೋಡಲಿಕ್ಕಿದೆ!

(Pic: Google)

ಆಸೆಯ ದಾಸರು

fight
ವಿಧಾನ ಸೌಧ 
ಶಾಸಕರ ಆಟದ ಮೋದ
ಬಿಡುವೆನೆಂದು ಹೋದವರಿಗೆ
ತೆರೆದುಕೊಳ್ಳುತ್ತದೆ ಗುಪ್ತ ಕೋಪ ವಿರೋಧ
ಚಿತ್ರಾವಿಚಿತ್ರ ಹೇಳಿಕೆ ಆಟ ದೊಂಬರಾಟ
ತಮ್ಮದೇ ಸರಿ ಉಳಿದದ್ದೆಲ್ಲ ಬೂಸಾ ವಾದ
ಸದ್ಯದ ದಳಗಳು ಉದುರಿದರೂ ಕರಾಳವಿದೆ ಭವಿಷ್ಯ
ಆಸೆದಾಸರ ನಡುವೆ  ಕನಸಾಗಲಿದೆಯೆ ರಾಮರಾಜ್ಯ?
(Pic courtesy: traffic-club)

ದುರಂತ

 

tree

ಅವರು ಇವರ
ಇವರು ಅವರ
ಬಡಿದರಂತೆ ಬಾಗಿಲ
ಒಡ್ಡಿ ಆಮಿಷ ; ಬೀಸಿ ಜಾಲ
ಎಳೆದರಂತೆ ಸೆಳೆದರಂತೆ
ಆಯಿತಂತೆ ಮನಸು ಚಂಚಲ!

ಸಂವಿಧಾನದಾಶಯ ಸರಿದರೆ
ಜನರ ಅಳಲನು ಮರೆತರೆ
ಅಚಲ ಚಿತ್ತ ತೊರೆದರೆ
ವ್ಯರ್ಥ ಮತದಾನ
ಪ್ರಜಾಪ್ರಭುತ್ವಕ್ಕಪಮಾನ
ದುರಂತಕ್ಕೆ ಕೊಟ್ಟಂತೆ ಆಹ್ವಾನ!

(Pic:Google)