ವೈಚಿತ್ರ್ಯ

calf

ನತದೃಷ್ಟ ಹಸು
ಹೆತ್ತಿದೆ ಕರು
ಸೃಷ್ಟಿ ವಿಪರೀತ
ಒಂದೇ ದೇಹ
ಮೂರು ಮುಖ
ತೊಂದರೆ ಉಸಿರಾಟ
ಅದಕ್ಕೆ ಸಾವು ಬದುಕಿನ ಆಟ…

ಸೇರಿದ್ದಾರೆ ಅಲ್ಲಿ ಜನ
ಭಕ್ತಿ ಪರವಶ ಕರುವಿಗೆ ಉದ್ದಂಡ!
ಮೊಬೈಲು ಕೆಮರಾ ಚಿತ್ರಗಳು
ತೆಗೆದು ಹರಿಬಿಟ್ಟಿದ್ದಾರೆ ವಾಟ್ಸ್ಯಾಪ್‌ಉ
ಜೊತೆಗೆ ಟ್ಯಾಗ್‌ಉ
ʼʼದೈವ ಲೀಲೆಯ ನೋಡಿ
ಮೂರುತಲೆ ಚಿತ್ರ ಶೇರ್‌ ಮಾಡಿ
ಅದೃಷ್ಟ ಬಾಗಿಲ ಬಡಿವುದು ನೋಡಿ!ʼʼ

ಮನುಷ್ಯ ತಲೆ
ಒಳಗೆ ಲಕ್ಷ ವಿಲಕ್ಷಣ ಕಲೆ

(Pic : Internet)

ತೆರೆ ಬಾಗಿಲ

pixabay5

ಬಾಗಿಲ ಬಡಿದಾ ಸದ್ದು
ಹೊರಗಡೆ ಕಾಯುತಲಿರುವರು
ಸ್ನೇಹ, ಸಂತಸ, ಸಹನೆ,
ಶಾಂತಿ, ಸರಳ, ಮಮತೆ
ಮನೆಯೊಳಗೀಗಾಲೆ ನೆಲೆಸಿದ್ದಾರೆ
ದ್ವೇಶ-ಈರ್ಷೆ
ಜಾಗವೆ ಇಲ್ಲ ಒಳ ಬರುವವರಿಗೆ!

ದ್ವೇಶ-ಈರ್ಷೆ ಈ ಇಬ್ಬರಾ
ಹೊರದಬ್ಬಿದರೆ
ಬಾಗಿಲ ಬಡಿದವರಷ್ಟೂ
ಬಂದೇ ಬರುವರು ಒಳಗೆ
ನಿಂದೇ ನಿಲುವರು ಬೆಳಗೆ

(Pic courtesy:Pixabay)

ಬೋಧಕನ ಬೆನ್ನು

rolls royce

“ಹಣಕ್ಕೆ ಆಗದಿರು ಹಿಂಬಾಲಕ
ನಿರ್ಧರಿಸು ನೀನೇನಾಗಬೇಕೀಗ
ಹಣವಂತನಾಗುವೆಯೋ?
ಹನುಮಂತನಾಗುವೆಯೋ?
ಸರ್ವಸ್ವವಲ್ಲ ಹಣ
ಸುಖತರದು ಧನ…
ಅದು ಮುಖವಾಡದೊಳಗ ಕುರೂಪ
ಅರಿವು ನಿರ್ಮಲ ಸ್ವರೂಪ
ಬಿಡು ಸ್ವಾರ್ಥ ಹಿಡಿ ಸ್ವರ್ಗ
ಇದೋ ಭಕ್ತಿ ಮಾರ್ಗ”

ಎಲ್ಲ ನುಡಿಮುತ್ತುಗಳ ಆರಿಸಿಕೊಂಡೆ
ನಾನೂ ಒಬ್ಬ ಮಂತ್ರಮುಗ್ಧ
ಕೇಳುಗರ ಮಂದೆ ಮುಂದೆ
ತಿಳಿತಿಳಿಯಾಗಿ ತಿಳಿಹೇಳಿ
ಆ ತೇಜ:ಪುಂಜರು ತೆರಳಿದ್ದಾರೆ
ವೇದಿಕೆಗೆ ಬೆನ್ನುಹಾಕಿ
ಅಡ್ಡಬಿದ್ದವರಿಗೆ ಹರಸಿ ಹಸನ್ಮುಖಿ…

ಕಾಯುವ ಚಾಲಕ ತೆರೆದ ಬಾಗಿಲ
ಅವರು ಹತ್ತಿದ್ದು ಭಾರೀ ವಾಹನ
ʼಅದಾವ ಕಾರು?ʼ ಪ್ರಶ್ನೆಗೆ ಉತ್ತರ
ʼಅದೇ ರೋಲ್ಸ್‌ ರಾಯ್ಸ್ ರಾಯರೇ‌
ಶಿಷ್ಯರ ಕಾಣಿಕೆ ಸಾಮಾನ್ಯವೆ !ʼ

ನೆನಪಾಗುತ್ತಲೇ ಇದೆ ಪ್ರತಿದಿನ
ವೇದಿಕೆಯಲ್ಲಿ ಬೆಳಗುತ್ತಿದ್ದ ವದನ
ಐದೂಬೆರಳ ವಜ್ರದುಂಗುರ ಚಲನ!

(Pic courtesy:Unsplash)

ಕನ್ನಡ ಓದುವ ಮಕ್ಕಳು

k

ನವೆಂಬರ್‌ 2019
“ಕನ್ನಡ” ಕೋಟ್ಯಧಿಪತಿ ಕಾರ್ಯಕ್ರಮ.
ಸರ್ಕಾರಿ ಕನ್ನಡ ಶಾಲೆಯಿಂದ ಬಂದ ಮಕ್ಕಳಿಗಾಗಿ ಕಾರ್ಯಕ್ರಮ…
ಅಲ್ಲಿ ತೇಜಸ್‌ ಆಯ್ಕೆಯಾಗಿ ಉತ್ತರಿಸಲು ಕುಳಿತಿದ್ದಾನೆ.
ಪ್ರಶ್ನೆಯೊಂದರ ಉತ್ತರಗಳ ಆಯ್ಕೆಯಲ್ಲಿ ಒಂದು ಉತ್ತರ “ಬೈನಾಕ್ಯುಲರ್”‌
ಈ ಇಂಗ್ಲೀಷಿನ ಪದ ತಿಳಿಯದು ಆ ಕನ್ನಡ ವಿದ್ಯಾರ್ಥಿಗೆ.
ಕನ್ನಡದಲ್ಲಿ “ದೂರದರ್ಶಕ”. ಅದು ಅವನಿಗೆ ತಿಳಿದಿತ್ತು.
ಕಾರ್ಯಕ್ರಮ ನಿರ್ವಾಹಕರಿಗೆ ಕನ್ನಡ ಪದ ತಿಳಿಯದಲ್ಲ!
ವೀಕ್ಷಕ ಮಕ್ಕಳ ಸಹಾಯದಿಂದ ಅವನು “ಬೈನಾಕ್ಯಲರ್”‌ ಅಂದ. ಮುಂದಿನ ಸುತ್ತಿಗೆ ಅರ್ಹತೆ ಪಡೆದ.
(ಇಷ್ಟು ಮಾತ್ರ ನಾನು ನೋಡಿದ್ದು)
ಖೇದವೇನೆಂದರೆ-ತಿಳಿದವರಿಂದಲೇ ಇಂಥಹ ತಪ್ಪು ಕನ್ನಡಮಕ್ಕಳಿಗಾಗುತ್ತಿರುವುದರ ಬಗೆಗೆ.

ತೇಜಸ್ ಕೊನೆಗೂ ೬‌,೪೦,೦೦೦ ಹಣ ಗೆದ್ದಿದ್ದಾನೆ!
ಶಾಲೆಯ ಬಳಿ ಮರ ಬೆಳೆಸುವ, ಅಪ್ಪ ಅಮ್ಮಂದಿರಿಗೆ ಸಹಾಯ ಮಾಡುವ,
ಒಂದು ಎಕರೆ ಜಮೀನು ಕೊಳ್ಳುವ, ಭೂಮಿ ಉಳುವ, ರೈತನಾಗುವ ಸುಂದರ ಕನಸು ಹೊತ್ತಿದ್ದಾನೆ.
(ಖುಷಿಯಾಯಿತು.)

 

ಕನ್ನಡಿಗರು

OLYMPUS DIGITAL CAMERA

ಕನ್ನಡಿಗರು
ನಾಡು ನುಡಿ
ಕಡೆದಿಟ್ಟ ದಿಟ್ಟರು….

ಶಾಂತರು ಅವಿಶ್ರಾಂತರು
ವಿನೀತರು ವಂದ್ಯರು
ಸಹಮತದಿ ನಡೆವವರು
ಸಾಧನೆಯ ಗುರಿ ಬಿಡರು
ಕರ್ನಾಟಕ ದೇಶ ದಿಟ್ಟರು

ಕೈ ಚಾಚಿದರೆ ಮೈದಡವಿ
ದುಡಿಸದೆಲೆ ಉಪಚರಿಸಿ
ಅಶನ ಅರಿವೆ ಅಂದಣವ
ನೀಡಿ ಅಂದಗಾಣುವವರು
ಕಲಿಗಳಲ್ಲಿ ಕಲಶ ಕನ್ನಡಿಗರು

ಜಗದ ಕಷ್ಟಗಳೆಲ್ಲ
ತನ್ನದೆನ್ನುವ ಹೃದ್ಯರು
ಹಸನು ಮನಸ ಸಹನರು 
ಸಾಮರಸ್ಯದ ಹರಿಕಾರರು
ಕಂನಾಡ ಚೆಲುವ ಚೆನ್ನುಡಿಗರು

ಕೊಡುಗೈಯ ಕರ್ಣರು
ರಾಷ್ಟ್ರ ಸಮ್ಮಾನಕ್ಕಾದ್ಯರು
ಆಢ್ಯ ಅಪ್ರತಿಮ ಅಜಾತರು
ನಿಸ್ವಾರ್ಥಿ ನಿರಪೇಕ್ಷರು
ಕರುನಾಡ ಪೆಂಪ ಕಂಪಿನವರು

ರಸಾಸ್ವಾದಿ ಸಂಪನ್ನರು
ಕಲಾರಾಧಕ ಕುಲರು
ಕೆಚ್ಚಿಗೆ ಅನ್ವರ್ಥ ಅನುರೂಪರು
ಅಸೀಮ ವೀರರ ಕಣಜ
ಕರ್ಣಾಟ ಕುಶಾಗ್ರಮತಿಗಳ ಬೀಡು

ಚರಿತೆಯುಳ್ಳವರು ಚಾರಿತ್ರರು
ಜಾಣರು ಜೇನಿಗರು 
ಸುಮನಸ ಸೂಕ್ಷ್ಮರು
ನಾಡು ನುಡಿ ಕಡೆದಿಟ್ಟ
ಕೀರ್ತಿಯ ಕರ್ಮಜರು ಕನ್ನಡಿಗರು

 

(ಚಿತ್ರ:ಅಂತರ್ಜಾಲದಿಂದ)