ಸೈನಿಕನ ಸಂದೇಶ

 

soldier

ಗೆಳೆಯಾ….

 

ಗಡಿಯಲ್ಲಿ ನಾನು ಕಾದುತ್ತಾ ಸಾವನಪ್ಪಿದೆನಾದರೆ

ನನ್ನ ದೇಶದ ಧ್ವಜದಿಂದ ದೇಹ ಮುಚ್ಚು

ನನ್ನ ಮನೆಗದನ್ನು ಕಳುಹಿಸಿಕೊಡು…

 

ನನ್ನೆಲ್ಲ ಪಾರಿತೋಷಕಗಳ ಎದೆಗಿಟ್ಟು ಅಲಂಕರಿಸು

ಅವಳು ಕನಸಿದ ಶ್ರೇಷ್ಠತೆಯ ಗುರಿ ಮುಟ್ಟಿದೆನೆಂದು

ನನ್ನ ತಾಯಿಗೆ ಮನದಟ್ಟು ಮಾಡು…

 

ಯೋಚನೆಯಲಿ ತಲೆ ತಗ್ಗಿಸಬೇಕಿಲ್ಲವೆಂದು

ನನ್ನ ತಂದೆಗೆ ತಿಳಿಸಿಬಿಡು

ನನ್ನಿಂದ ಇನ್ನೆಂದೂ ಚಿಂತೆ ಉದ್ವೇಗಗಳಿಲ್ಲವೆಂದು

 

ತಮ್ಮನಿಗೆ ತಿಳಿಹೇಳು, ಓದಿನತ್ತಲೆ ಗಮನವಿಡಲು

ಮತ್ತು ನನ್ನ ಬೈಕಿನ ಕೀ ಅವನಿನ್ನು ನನಗೆ

ಹಿಂತಿರುಗಿಸುವ ಅಗತ್ಯವಿಲ್ಲವೆಂದು…

 

ದು:ಖಿಸದಿರೆಂದು ತಂಗಿಗೆ ತಿಳಿಸು

ಅವಳ ಅಣ್ಣ ಸೂರ್ಯಾಸ್ತಮಾನದಾಚೆಯ

ದೀರ್ಘ ನಿದ್ರೆಗೆ ಜಾರಿರುವನೆಂದು…

 

ಸಣ್ಣ ಮಗುವಿನ ಜೊತೆಯ ನನ್ನ ಪತ್ನಿಗೆ

ಕ್ಷಮಿಸಬೇಕೆಂದು ಪ್ರಾರ್ಥಿಸಿಬಿಡು

ಅಳುವ ಮಗುವಿಗೆ ಸಾಂತ್ವನ ಅವಳಿಂದಲೆ ಇನ್ನುಮುಂದು…

 

ದು:ಖಿಸದಿರಲಿ ನನ್ನ ದೇಶ ಬಾಂಧವರು

ಏಕೆಂದರೆ ಸೈನಿಕನ ಹುಟ್ಟಿರುವುದು

ಗಡಿಕಾಯುತ್ತ ಸಾವಿನಲ್ಲಿ ವಿರಮಿಸಲು..

 

(ವಾಟ್ಸಾಪಿನಲ್ಲಿ ಬಂದ ಆಂಗ್ಲ ಕವಿತೆಯ ಭಾವಾನುವಾದ)    

 

 

Advertisements