ದೊರೆ – ಸಾವರ್ಕರ

vvani

ದೊರೆಸ್ವಾಮಿ ʼನಕಲಿ ಹೋʼ
ರಾಟಗಾರ ಎಂದು ನಂಬಿಸಲು
ಯತ್ನಾಳ್‌ ಯತ್ನ
ಸಾವರ್ಕರ್‌ ನ-
ʼಕಲಿ ಹೋರಾಟಗಾರʼ ಎಂದು
ಬಿಂಬಿಸಲು ದೊರೆಸ್ವಾಮಿ ಯತ್ನ
ಹುರುಳಿಲ್ಲದಲ್ಲಿ ಬಾಯಿಟ್ಟ ಶಾಸಕರಿಂದ
ಈಗ ಕಲಾಪ ನುಂಗುವುದಷ್ಟೇ ಪ್ರಯತ್ನ

vk

ಎರಡು ರೀತಿ

tv9

ಕೇಂದ್ರದಲ್ಲಿ ಜನಮನ ಕದ್ದ
ಅಪರೂಪ ನಾಯಕನ
ಸಂಶಯಾತೀತ ಆಡಳಿತ ನಿರಾತಂಕ

ರಾಜ್ಯದಲ್ಲಿ ಫೋನಾಲಿಸಿ ಕದ್ದ
ಆರೋಪ ನಾಯಕ
ಹರಡಿದ್ದು ಸಂಶಯ ಮತ್ತು ಆತಂಕ

ಕುದುರೆ ವ್ಯಾಪಾರ

htrade

ಏನಿದು ಕುದುರೆ ವ್ಯಾಪಾರ?
ಅವರವರ ಮೂಗನೇರಕ್ಕೆ ರಾಜಕಾರಣಿಗಳೇ
ಬರೆಯತೊಡಗಿದ್ದಾರೆ ವ್ಯಾಖ್ಯೆ!

ಒಂದು ಪಕ್ಷದವರ ಆರೋಪ
“ಹಣಸುರಿದು ಕೊಂಡಿದ್ದಾರೆ ಶಾಸಕರನ್ನ
ಮಾಡುತ್ತಿದ್ದಾರೆ ಕುದುರೆ ವ್ಯಾಪಾರ”
ಮತ್ತೆ ಅವರದೇ ಕರೆ ಹೊರ ಹೋದವರಿಗೆ
“ಹಿಂತಿರುಗಿ ಬನ್ನಿ; ಬೇಡಿಕೆಗಳ ತನ್ನಿ
ನಿಮ್ಮಾಸೆಗಳ ಪೂರೈಕೆ ಆಯಿತೆನ್ನಿ
ನಾವು ಬಿಟ್ಟೆವು; ನಿಮಗೇ ಇನ್ನು ಮಂತ್ರಿಗಿರಿʼʼ
ಇದಲ್ಲವೆ ವ್ಯಾಪಾರದ ಮತ್ತೊಂದು ಸನ್ನಿ!?

(Pic courtesy: Artist (Google)

ಮುಚ್ಚಿಡು

po

ನಿರ್ಗಮನದ ಬಾಗಿಲಲ್ಲಿರುವವರು
ಆಗಮನದ ಹವಣಿಕೆಯಲ್ಲಿರುವವರು
ಇಬ್ಬರೂ ನಡೆಸಿದ್ದಾರೆ ಪೂಜೆ ಜೋರು
ಪ್ರಾರ್ಥನೆ ಹೀಗಿರಬಹುದು ಚೂರು
ಒಂದೆಡೆ ʼಮಾಡಿದ ಹಗರಣಗಳ ಬಚ್ಚಿಡುʼ
ಇನ್ನೊಂದೆಡೆ ʼಮಾಡಲಿರುವ ಹಗರಣ ಮುಚ್ಚಿಡುʼ

 

(Pic:Google)

ಮರೆತವರು

run

ದಿನವೂ ಸಚಿವರುಗಳದು ಸಾಗಿದೆ
ಶಾಸಕರ ಮನೆಯಲ್ಲಿ ಮನವೊಲಿಕೆ
ಕೆಲವರು ಹಣೆಬರಹ ತಿಳಿಯೆ
ಜ್ಯೋತಿಷಿಗಳ ಮನೆ ಮನೆಗೆ
ಮತ್ತೆ ಕೆಲವರದು ʼಟೆಂಪಲ್ ರನ್ನುʼ
ತಪ್ಪಿಯೂ ಹೊರಳಿಸರು ಒಬ್ಬರೂ
ಮತವಿತ್ತು ಗೆಲ್ಲಿಸಿದ ಜನರತ್ತ ಕಣ್ಣು‌ !

(Pic courtesy: Shantkumar – Google)

 

ಒತ್ತಿ ಕರೆಯದಿರಿ

Sha

ರಾಜ್ಯದ ಆಡಳಿತ ಪಕ್ಷದವರಿಗೆ
ಇದೋ ಪುಟ್ಟ ಸಲಹೆ:
“ಮಿತವಾಗಿ ಕರೆಯಕೊಡಿ
ಶಾಸಕರ ಒತ್ತಿ ಮಾತ್ರ ಸೆಳೆಯದಿರಿ
ಒತ್ತು ʼಅಮಿತʼವಾಗಿ ಮತ್ತೆ
ಅವರು ʼಶಾ-ಸಖʼರಾದಾರು ಜಾರಿ !”

 

(Pic from Google)

ಆಸೆಯ ದಾಸರು

fight
ವಿಧಾನ ಸೌಧ 
ಶಾಸಕರ ಆಟದ ಮೋದ
ಬಿಡುವೆನೆಂದು ಹೋದವರಿಗೆ
ತೆರೆದುಕೊಳ್ಳುತ್ತದೆ ಗುಪ್ತ ಕೋಪ ವಿರೋಧ
ಚಿತ್ರಾವಿಚಿತ್ರ ಹೇಳಿಕೆ ಆಟ ದೊಂಬರಾಟ
ತಮ್ಮದೇ ಸರಿ ಉಳಿದದ್ದೆಲ್ಲ ಬೂಸಾ ವಾದ
ಸದ್ಯದ ದಳಗಳು ಉದುರಿದರೂ ಕರಾಳವಿದೆ ಭವಿಷ್ಯ
ಆಸೆದಾಸರ ನಡುವೆ  ಕನಸಾಗಲಿದೆಯೆ ರಾಮರಾಜ್ಯ?
(Pic courtesy: traffic-club)

ದುರಂತ

 

tree

ಅವರು ಇವರ
ಇವರು ಅವರ
ಬಡಿದರಂತೆ ಬಾಗಿಲ
ಒಡ್ಡಿ ಆಮಿಷ ; ಬೀಸಿ ಜಾಲ
ಎಳೆದರಂತೆ ಸೆಳೆದರಂತೆ
ಆಯಿತಂತೆ ಮನಸು ಚಂಚಲ!

ಸಂವಿಧಾನದಾಶಯ ಸರಿದರೆ
ಜನರ ಅಳಲನು ಮರೆತರೆ
ಅಚಲ ಚಿತ್ತ ತೊರೆದರೆ
ವ್ಯರ್ಥ ಮತದಾನ
ಪ್ರಜಾಪ್ರಭುತ್ವಕ್ಕಪಮಾನ
ದುರಂತಕ್ಕೆ ಕೊಟ್ಟಂತೆ ಆಹ್ವಾನ!

(Pic:Google)

ಕಾಣದು – ಕೇಳದು

poverty

ʼಶಾಸಕರು, ಅತೃಪ್ತರು
ರಾಜೀನಾಮೆ, ಸ್ಪೀಕರು
ನನಗೇನೂ ಗೊತ್ತಿಲ್ಲ
ಯಾರೂ ಹೋಗಿಲ್ಲ
ಸುಭದ್ರ, ಕುಸಿತ, ಕಿಡ್ನಾಪು
ಬಿಗಿಭದ್ರತೆ, ಮೈತ್ರಿ, ರೆಸಾರ್ಟು
ನೂರ್ನಾಲ್ಕು, ನೂರೇಳುʼ
ಮೂರು ದಿನದಿಂದಲೂ
ಇಷ್ಟೇ ವಾಕರಿಸುವ ಸುದ್ದಿವಾಹಿನಿಗಳು
ಆಡಳಿತಯಂತ್ರವೆಂದೋ ಹಾಳು
ಕಿವುಡೀಗ ಎಲ್ಲರಿಗೂ ಕುರುಡು
ಕಾಣಿಸರು ಜನ ಕೇಳಿಸದವರ ಗೋಳು

(Pic courtesy:Pixabay)

ಮೈತ್ರಿಗೆ ಬರೆ

614-01486587

ಸಿಟ್ಟಿನ ಶಾಸಕರು ಕೊಟ್ಟರು ರಾಜೀನಾಮೆ
ಹೊರಟೇಬಿಟ್ಟರು ದೂರ ಮುಂಬಯಿಗೆ
ಹೊರಟವು ಸೂಟ್ಕೇಸು ಅವರೊಟ್ಟಿಗೆ
ʼಒಳಗೇನಿದೆ ಶಾಸಕರೆ!?ʼ ಕೇಳಿದರೆ
ʼಉಳಕೊಳ್ಳೆ ಇಟ್ಟೆವೊಳಗೆ ಬರೇ ನಮ್ಮ ಬಟ್ಟೆ ಬರೆ
ಮತ್ತೆ ಹಾಕಿಟ್ಟೆವಿಲ್ಲಿ ಮೈತ್ರಿಗೆ ಮರೆಯದಂಥ ಬರೆ!ʼ

(Pic:Google)