ಪ್ರಕೃತಿಯ ಅಲಾರಂ

bird

ನಸೆ ಬೆಳಗಿನ
ಕೋಳಿ ಕೂಗು
ಕಾಗೆ ಕರ್ಕರ
ಕೋಗಿಲೆಯ ಕುಹೂ
ಹಕ್ಕಿ ಪಿಕ್ಕಿಗಳ
ಚಿಲಿಪಿಲಿಯ
ಉಲಿತಗಳೆಲ್ಲ
ನನ್ನನ್ನೆಚ್ಚರಿಸುವ
ಪ್ರಕೃತಿಯ
ಅದ್ಭುತ ಅಲಾರಂ

ಖಗ ಸುಪ್ರಭಾತದ
ಮಧುರತೆ
ಮೇಳೈಸಿ
ಕಿವಿ ಮುಟ್ಟಿ
ಮನ ತಟ್ಟಿ
ಮೈಮರೆಸಿ ಜಾರಿ
ನಾನು ಮತ್ತೆ
ಗಾಢ ನಿದ್ರೆಯಲ್ಲಿ ಲೀನ !
ಸುಖ ನಿದ್ರೆಗೆ ಸೆಳೆವ
ಪ್ರಕೃತಿಯ ಅಲಾರಂ
ನಿನಗೆ ಸಲಾಂ