ಸಹೃದಯ ಕವಿ ವಿಮರ್ಶೆ

ಕಳೆದ ವರ್ಷ ನಾನು ಬರೆದ ಮಕ್ಕಳ ಕವಿತೆಗಳ ಪುಸ್ತಕ “ಕಪ್ಪೆಚಿಪ್ಪು”   ಶ್ರೀ ಡಿ.ಎ. ಲಕ್ಷ್ಮೀನಾಥರ ಕೈಗೆ ಇತ್ತೀಚೆಗೆ ಸಿಕ್ಕಿದ್ದು ವಿಶೇಷ.   ನನ್ನ ಆತ್ಮೀಯ, ಸಾಹಿತಿ ಟಿ. ಆರ್‌. ವರದರಾಜನ್‌ ಅವರ ಮೂಲಕ ಅದು ಅವರ ಕೈ ಸೇರಿದೆ.  ಸ್ವತ: ಕವಿಯಾದ ಅವರು ಪುಸ್ತಕವನ್ನು ಆಸ್ತೆಯಿಂದ ಓದಿ, ತಮ್ಮ ಅನಿಸಿಕೆಗಳನ್ನು ನನಗೆ ತಲುಪಿಸಿದ್ದಾರೆ.  ಬರಹಗಾರನಿಗೆ ತನ್ನ ಬರಹಗಳು ಎಲ್ಲರನ್ನೂ ತಲುಪಬೇಕೆನ್ನುವ ಮಹದಾಸೆ ಇರವುದು ಸಾಮಾನ್ಯ.  ಮಕ್ಕಳ ಸಾಹಿತ್ಯದ ಬಗೆಗೆ ಹಿರಿಯರಿಗೆ ಹೆಚ್ಚಿನ ಆಸಕ್ತಿ ಇರುವುದಿಲ್ಲ ಅನ್ನುವ ಅಭಿಪ್ರಾಯವೂ ಇದೆ. ಅದರಲ್ಲೂ ಮಕ್ಕಳ ಸಾಹಿತ್ಯವನ್ನು ಓದಿ, ಅದರ ವಿಮರ್ಶೆ ಮಾಡುವುದು ವಿರಳ.  ಅಂಥದೊಂದು ಮೆಚ್ಚುಗೆಯ ಕಾರ್ಯ ಶ್ರೀ ಲಕ್ಷ್ಮೀನಾಥರಿಂದ ಆಗಿದ್ದು,  ನನಗಂತೂ ಬಹಳ ಖುಷಿಕೊಟ್ಟಿದೆ. 

“ಕಪ್ಪೆಚಿಪ್ಪು” ಪುಟಗಳನ್ನು ತೆರೆದು, ಓದಿ ಸಾದರ ಪಡಿಸಿದ ಅಭಿಪ್ರಾಯಗಳನ್ನು ಅವರದೇ ಸುಂದರ ಬರವಣಿಗೆಯೊಂದಿಗೆ ಇಲ್ಲಿ ಪ್ರಕಟಿಸಿದ್ದೇನೆ.  ಕವಿಯ ಸಹೃದಯ ಮಾತುಗಳಿಗೆ ನಾನು ಆಭಾರಿ.