ಅತಿಥಿ ಗೃಹ

rumi-meditating

ನರದೇಹ
ಇದು ಅತಿಥಿ ಗೃಹ
ದಿನ ಬೆಳಗೆ
ಹೊಸತೊಂದರ ಆಗಮನ

ಒಂದು ಖಷಿ ಒಂದು ವಿಷಣ್ಣತೆ
ಒಂದು ಸಣ್ಣತನ ಪ್ರವೇಶ
ಒಮ್ಮೆ ಕ್ಷಣಹೊಳೆವ ತಿಳಿವಳಿಕೆ
ಮತೊಮ್ಮೆ ನಿರೀಕ್ಷೆಯೂ
ಮಾಡದಿದ್ದ ಅತಿಥಿಯ ಆಗಮಿಕೆ

ಸ್ವಾಗತಿಸು ಮತ್ತು ಉಪಚರಿಸೆಲ್ಲರ
ಗುಂಪಾಗಿ ಬರುವ ದು:ಖದುಮ್ಮಾನವಿಷಾದಗಳು
ಮನೆಯ ಪರಿಕರಗಳ ದೋಚಬಂದವರಾದರೂ ಸರಿ
ಪ್ರತಿ ಅತಿಥಿಯನ್ನೂ ಗೌರವಿಸಿ ಆದರಿಸು
ಏಕೆಂದರೆ ಅವರು ಹಳೆಯದನ್ನು ಕಳಚಿ
ಮತ್ತೊಂದರ ಮಹೋತ್ಸವಕ್ಕೆ
ನಿನ್ನ ಅಣಿಗೊಳಿಸಬಂದವರು

ತಪ್ಪು ಯೋಚನೆ ನಾಚಿಕೆ ತಪ್ಪದವಮಾನ
ಎಲ್ಲರನ್ನೂ ಬಾಗಿಲಲ್ಲೆ ನಗುನಗುತ್ತ ಸಂಧಿಸು
ಒಳಗೆ ಸ್ವಾಗತಿಸು

ಯಾರು ಬಂದರೂ ಕೃತಜ್ಞನಾಗಿರೆಲ್ಲರಿಗೂ
ಏಕೆಂದರೆ ಪ್ರತಿಯೊಂದು ಆಗಮಿಕೆಯ ತಿರುಳು
ದೂರದವರಾರೋ ಕಳುಹಿಸಿಕೊಡುತ್ತಿರುವ
ಮಾರ್ಗ-ದರ್ಶನಗಳು

(ರುಮಿಯ ಕವಿತೆಯ ಭಾವಾನುವಾದ)

(Pic courtesy:Google)

2 thoughts on “ಅತಿಥಿ ಗೃಹ

  1. Chandrashekhara ಹೇಳುತ್ತಾರೆ:

    ಅತಿಥಿ ಗೃಹ- ನಿಮ್ಮ ಕವನವನ್ನೋದತೊಡಗಿದಾಗ ಕವಿ ರುಮಿ ಯಾರೆಂಬ ಕೌತುಕ ಮೂಡಿ- ಆತ ಪರ್ಸಿಯಾದ ಹದಿಮೂರನೇ ಶತಮಾನದ ಕವಿ ಬರೆದಿರುವ ಮೂಲ ಕವಿತೆ ಇಂಗಿಷಿಗೆ ಕೊಲೆಮನ್ ಬರ್ಕ್ಸ್ ಅನುವಾದ ಮಾಡಿರುವ ಸಾಲುಗಳನ್ನು ಓದಿ ಸಂತೋಷವಾದದ್ದಕ್ಕಿಂತ ಹೆಚ್ಚಾಗಿ ಅದರ ಕನ್ನಡೀಕರಣವು ಸಹ ಇಷ್ಟವಾಯಿತು. ಹೀಗೆ ಮುಂದುವರಿಯಲಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s