ಹೆಬ್ಬೆರಳ ಅಳಲುಗಳು

thumb-mark-2591734_960_720

ಇತ್ತೀಚೆಗೆ ಹೆಬ್ಬೆರಳ ನೆನಪು
ಕಡಿಮೆಯಾಗಿದೆ
ಸಾಕ್ಷರತೆಯ ಮಟ್ಟ ಏರಿರುವುದರ
ಬಗೆಗೂ ಸಂಶಯವಿದೆ

ekalavya

ಧನುರ್ವಿದ್ಯೆಯಲ್ಲಿ
ಹೆಬ್ಬೆಟ್ಟಲ್ಲದ ಏಕಲವ್ಯನ
ಹೆಬ್ಬೆರಳ ಗುರಿಯಾಗಿಸಿದ ಗುರು
ಯಾವ ಬೆಟ್ಟ(ನು) ಗೆದ್ದ!

the-hand-2426410_960_720

ಹಿಡಿಯೆಂದ ದಾನಿಗಳ ನುಡಿಗೆ
ಬೊಗಸೆಯಾದವು ಕರಗಳು
ಹೆಬ್ಬೆರಳುಗಳು ಮಾತ್ರ
ಹೊರ  ದಿಟ್ಟಿಸಿದವು!

pexels-photo-1454797

ಅವಳ ಕುರುಳ
ನೇವರಿಸುವ ಕರದಲ್ಲಿ
ಹೆಬ್ಬೆರಳು ದು:ಖಿ
ನಾಲ್ಕೂ ಬೆರಳು
ನೇವರಿಸಿದಮೇಲಷ್ಟೇ
ಬರುವುದಲ್ಲ ತನ್ನ ಸರದಿ!

ಅವಳ ಗಲ್ಲ ಒತ್ತಿ
ಕೆನ್ನೆ ಕೆಂಪಗಾಗಿಸಲು
ಬೆರಳುಗಳಲ್ಲಿ ಸ್ಪರ್ಧೆ ನಡೆಯಿತು
ನಾಲ್ಕು ಒಟ್ಟಾಗಿಯೂ
ಒಂಟಿಯಾಗಿಯೇ
ಹೆಬ್ಬೆರಳು ಜಯಿಸಿತು!

(Pics courtesy: Pixabay/Pexels/Internet)

 

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s