ಬುದ್ಧ ಕೃಷಿ

buddha

ಅರಮನೆಯ ಅಂಗಳದವನು
ಕೆಸರ ಹೊಲಕ್ಕೆ ಕಾಲಿಡುವನೆ!
ನಳನಳಿಸುವ ಕಳೆಯ ಕಿತ್ತು
ಪೈರುಗಳಾರೈಕೆ ಮಾಡುವನೆ!
ಬೆಳೆದ ಬೆಳೆಯ ಚೈತನ್ಯ ಹೀರುವನೆ!

ಆದರಿವನೋ…
ಅಮೃತ ಮಹಲಿನಿಂದ ನಿವೃತ್ತಿಗೊಂಡು
ತನ್ನೊಳಗ ಹೊಲದಲ್ಲೆ ಕೃಷಿಮಾಡಿದವನು?!

ಹೆಪ್ಪುಗಟ್ಟಿದ್ದ ನಂಬಿಕೆಗಳ
ದ್ರವಿಸಿ ದೂರಿಸಿ
ಮೌಢ್ಯ ಕಳೆಗಳ ಬೇರ ಕಳಚಿ
ಕಳೆತು ರೈತನಾದವನು!

ಚಿತ್ತಕ್ಕೆ ಚಿಂತನೆಯ ನೀರ
ನಿರಂತರ ಹನಿಸಿ
ಬಿಸಿಯುಣಿಸಿ ನಿಷ್ಠುರ ಸತ್ಯ
ಬೆಳೆವ ಕೃಷಿಕನಾದವನು

ಬೆಳೆದ ಚಿಂತನೆಯ ಬೆಳೆಯ
ಬಳಿ ಬಂದವರ ಹೊಲಗಳಿಗೆರಚಿ
ವಿಸ್ತರದ ಬಿತ್ತನೆಗೆ ತೊಡಗಿದವನು

ಬೆಳೆದವರು ಬೆಸೆದು
ದೆಸೆದೆಸೆಗೂ ಬುದ್ಧನುಡಿ
ಬೀಜಗಳ ಹರಡಿದರು

ಕಳೆ ಬೆಳೆಯುವುದು ನಿಂತಿಲ್ಲ
ಬುದ್ಧ ಕೃಷಿಯೂ ನಿಲ್ಲದು

buddh

(Pic courtesy: Pixabay)

3 thoughts on “ಬುದ್ಧ ಕೃಷಿ

  1. ಆದರೂ ಬುಧನ ಹೆಸರಿಲೀನನೇಕರು ಬುದ್ಧನ್ನನ್ನೇ ದಾರಿತಪ್ಪಿಸುವಂತೆ ಮಾಡಹೊರಟಿರುವುದು ವಿಪರ್ಯಾಸವೇ ಸರಿ .ಪ್ರಾಯಶಃ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ಬಿಡಿಸಿಕೊಳ್ಳಲು ಒದ್ದಾಡುತ್ತಿರುವ ಬುದ್ಧನನ್ನು ಹೊರಗೆಳೆಯುವ ಪ್ರಯತ್ನಕ್ಕೊಂದು ದಿಕ್ಸೂಚಿ ಮೇಲಿನ ಪದ್ಯದ ಸಾಲುಗಳು.

    • ವಿಶ್ವದ ಎಲ್ಲ ಮಹಾನ್ ಚಿಂತನೆಗಳನ್ನು ದಿಕ್ಕು ತಪ್ಪಿಸುವ ಮಂದಿ ಇದ್ದೇ ಇರುತ್ತಾರೆ. ಕೊನೆಯ ಸಾಲುಗಳಲ್ಲಿ ಅದನ್ನು ತಿಳಿಸುವ ಪ್ರಯತ್ನ ಮಾಡಿದ್ದೇನೆ. ತಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s