ನಾಳೆ

earth

ಅಗೋಚರವೂ
ಅದೃಶ್ಯದಲ್ಲಿರುವುದೂ
ಅಸದೃಶವೂ ಆದ ಅದು
ಆಸೆಬೀಜಗಳಾಗರ

ಅಸ್ಪಷ್ಟಕ್ಕೆಳೆವ ಜಿಗಿತ
ಭಯದ ಬೀಡು
ನಿತ್ಯವೂ ಸುಳಿವ ಗೀಳು
ಕವಿ ಎಂದೂ ಮುಗಿಸದ
ಮಹಾಕಾವ್ಯ!

ಅವಿತ ಅದ್ಭುತ
ಕಿನ್ನರ ಲೋಕ
ವಿರಹಿಗೆ ನಿಲುಕದ ದೂರ

ಹಾರಾಡಿ ಹುಡುಕು ಬೇಟೆ
ಈಜಾಡಿ ಹೆಕ್ಕಬೇಕಿರುವ ಮುತ್ತು
ಅಭದ್ರತೆಯ ತೆರೆ ನೀರ್ಗುಳ್ಳೆ

ಬಂದೀತೋ ಬಾರದೊ
ಊಹೆಗರಳುವ ಬೆಳಕು
ಇಂದು ಮುಗಿದರೆ
ಹುಟ್ಟಿಗೆ ರಹದಾರಿ
ಇಂದಿಟ್ಟ ಹೆಸರು
ಹುಟ್ಟುತ್ತಲೆ ಮರುನಾಮಕರಣ

ಕರ್ಮ
ಕಾಯಲೇ ಬೇಕು
ಸೂರ್ಯ ನಡಿಗೆಗೆ ಅದರ ತಳಕು
ಕತ್ತಲ ಕಾಡು ಕಾಣದ ಅದು
ಯಾರ ನೆಂಟ
ದೇಹ ಮನಸು ಯಾ ಮಾಯೆಗ?

(ಅಮೆರಿಕದ ಬಂಧು
ಭಾರತದ ನನ್ನೊಡನೆ ಮಾತು
ಅವನಿಗದು ನಾಳೆಗೆ ಸಂದುವ ನಾನು!)

ಲೆಕ್ಕ ಸಿಕ್ಕುವ ಇಂದು ನಿನ್ನೆ
ನಿಲುಕದ ಅನಂತ ’ನಾಳೆ’
ಹೊಳೆವಷ್ಟರಲೆ ಒಳಗೆ
ಹರಿದು ಹೋಗುವ ಹೊಳೆ!

(ಚಿತ್ರ: ಅಂತರ್ಜಾಲದಿಂದ)

Advertisements

6 thoughts on “ನಾಳೆ

  1. Chandrashekhara ಹೇಳುತ್ತಾರೆ:

    ಓದಿದೆ, ಮತ್ತೂ ಓದಿದೆ, ಅರ್ಥವಾಗದೆ, ಅಗೋಚರವಾದ ಅನಂತದೆಡೆಗೆ ಮನದ ಹರಿವನ್ನು ಜಾರಿಸಿದ ಆ ಸತ್ಯದ ಅರಿವಿಗೆ ಕಣ್ತೆರೆಸುವ ಒಂದು ಹನಿಗವನಕ್ಕೆ ನನ್ನೊಳಗೆ ನಾನೆ ನಮಿಸಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s