ತೆಗೆ ಬಾಯಿ

scold

ಪುರಾಣ

ಸಮುದ್ರ ಮಥನದ ಹಾಲಾಹಲ ನುಂಗಿ ಹರ ವಿಷಕಂಠ
ನಂತರ ಉಕ್ಕಿದ್ದೆ ಹಳಿವ ಹುಳಿ
ನರ ಚಾಚಿ ನಾಲಗೆ
ಮತ್ತಿಷ್ಕಕ್ಕೇರಿಸಿ
ತೆಗಳುವ ತೆವಲಿನ ಪಾಲಕ

ಪ್ರಶ್ನೆ:

ನಿಂದನೆಯ ಹರಿಕಾರನಾರು
ಪರ್ವತರಾಜನೆ
ಹಿರಣ್ಯಾಕ್ಷ-ಕಶಿಪುವೆ
ಮಂಥರೆ ಕೈಕೆಯಿ ಶೂರ್ಪನಖಿಯರೆ
ರಾವಣ  ಶಿಶುಪಾಲ ಶಲ್ಯ ದ್ರುಪದ ದುರ್ಯೋಧನ ದುಶ್ಯಾಸನರೆ
ಮತ್ತೆ ಕಲಿಯಲ್ಲಿ ಪರಂಪರೆಯ ಪರಿಪಾಲಕರು
ಪುಢಾರಿಗಣವೆ, ಆ-ರಕ್ಷಕರೆ, ಅಧಿಕಾರಶಾಹಿಗಳೆ
ವಾಹಿನಿಗಳ ಚರ್ಚೆತಾಣಿಗರೆ, ಅತ್ತೆ ಸೊಸೆಯರೆ, ಕುಕವಿಯೆ ?!

ಪ್ರಸ್ತುತ:

ವಿಷಣ್ಣತೆಯ ಬೇರಿದು
ಹದ ಸಮಯ ಕಾದು ಒಳಗೆ ಊರಿ ರೋಗ ಹರಡುವ ವೇಗಿ

ಕಂಡ ಕಂಡವರ ದಂಡಿ ದಂಡಿ
ತೆಗಳುವ ಮನಸ್ಸಿನ ತುರಿಕೆ ಅಂಟಿ ನಾಲಗೆಯ ಕಂಟಿ

ನೆರೆಮನೆಯವನು ಸಿಕ್ಕಿ ಹಲ್ಕಿರಿದು ಉಭಯ ಕುಶಲೋಪರಿ
ಮನೆ ಸೇರಿದೊಡನೆ ಬೈಗುಳ ಭೋರ್ಗರಿ

ದೂರದೂರಿನವನ ಕರೆಗೆ ಹೊಗಳಿ ಹೊನ್ನ ಕಿರೀಟವಿರಿಸು
ಗಹಗಹಿಸಿ ಕರೆ ಮುಗಿಸಿ ಮರುಕ್ಷಣ ಬೈದು ಬಜಾಯಿಸು

ಮಿತ್ರ ಮನೆ ಹೊಕ್ಕರೆ ಉಪಚರಿಸಿ
ಬಾಗಿಲಲ್ಲಿ ಬೀಳ್ಕೊಟ್ಟ ಬೆನ್ನಿಗೇ ಬಳಬಳ ಬೈಗುಳ ಸುರಿ

ಮುಖಾಮುಖಿಯಲ್ಲಿ ’ನೀವು ತಾವು’
ಬೆನ್ನಲ್ಲಿ”ಅವನಿವನು ಅದು ಇದು’, ನಿಕೃಷ್ಟತೆಯ ಪರಮಾವಧಿ!

ಬಾಯಿಂದ ಬರುವ ಏಕ ಮಂತ್ರ
ನಿಂದನೆಯ ನುಡಿಗಟ್ಟು ಮಟ್ಟು ನಾಲಿಗೆಯೆ ಗರಗಸಯಂತ್ರ

ಬಂಧು ಬಳಗ ಅಪ್ಪ ಅಮ್ಮ ಮಕ್ಕಳು ಮೊಮ್ಮಕ್ಕಳು
ಮರಿಮಕ್ಕಳ ಬೊಜ್ಜ, ಜರಿವ ಬೈಗುಳು ಆಗದೆಂದಿಗು ಕುಬ್ಜ!

ಗಂಡ ಹೆಂಡತಿ ಜಗ್ಗಾಡಿ ಮುಖ ಮುರಿದು
ಮೂದಲಿಸಿ ಬೈದಾಡಿ ಏದುಸಿರು ಬಿಡುವುದೇ ಪ್ರೀತಿ ಪರಿ !

ಮೊನ್ನೆ, ಉಸಿರು ಗಂಟಲಲ್ಲಿ ಸಿಕ್ಕಿ
ಬಿಗಡಾಯಿಸಿ ದೌಢಾಯಿಸಿ ವೈದ್ಯನ ಅಟಕಾಯಿಸಿದೆ

ದರಿದ್ರ ವೈದ್ಯ, ಪುಂಖಾನುಪುಂಖ ಪ್ರಶ್ನಿಸಿ ಕೆದಕಿ ಕೊನೆಗೂ
ಗಳುಹಿದ ನಿಮ್ಮ ನಾಲಗೆ ಒತ್ತಡದಲ್ಲಿದೆ

ವೈದ್ಯನಿಗೆ ಹಿಡಿಶಾಪ ಒಳಗೆ ಕೋಪ ಝಳಪಿಸಿದೆ
ಅರೆ! ಮರು ಘಳಿಗೆ ಉಸಿರು ಜಾರಿಬಿಡುವುದೆ ನಿರಾಳತೆಗೆ !

ಗಳಹುವ ಹುಳು ದಂಡಿಯಾಗಿ ಹೊರ ತೆವಳುತ್ತಿವೆ
ಯಾರೂ ಸಿಕ್ಕದೆ ಜೀವ ಅಡಕತ್ತರಿಯಲ್ಲಿ ತೊಳಸುತ್ತಿವೆ

ಪರಿಹಾರಕ್ಕೆ ಇದೊ ನನ್ನ ಹಳೆದಿನಗಳ ಹಳಿಯತೊಡಗಿ
ಬಿಚ್ಚಿತು ತಪ್ಪುಗಳ ಗರಿ, ಕೆದರಿ ಉದ್ದವಾಯಿತು ಕೊಳಕ ಪಟ್ಟಿ!

ನನ್ನ ಜನ್ಮಕ್ಕಷ್ಟು ಶಪಿಸಿ ವಾಚಾಮಗೋಚರ ಪಠಿಸಿ ಪ್ರಲಾಪಿಸಿ
ದ ಮೇಲೆ ಈಗ ಆರೋಗ್ಯ ಸುಧಾರಿಸಿದೆ!

ನನ್ನ ಹಳಿದು ಶುನಕ ಬಾಯಿಯಾದಮೇಲೆ ನಿಂದಕನ ಪೊರೆವ
ಹಂದಿಯಾದ ಮೇಲೆ, ಕೇರಿ ಶುದ್ಧಿಯಾಗಿದೆ!

6 thoughts on “ತೆಗೆ ಬಾಯಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s