ಅವನಾಗದ ನಾನು

oldman

ದಪ್ಪ ಹಾಸಿಗೆಯ ಮೇಲೆ
ಅಪ್ಪನ ಅಪ್ಪ
ಸವೆದ ದೇಹ ಉಳಿಸಿಕೊಂಡು
ಏನನ್ನೊ ಗೊಣಗುತ್ತ ಕುಳಿತಿದ್ದ

ನಾನು ಅವನ ಕಾಲಕೆಳಗೆ
“ಅಜ್ಜ” ಅಂದೆ
“ಯಾರು ?”
ಕಿರುಕಣ್ಣ ಕಿರಿದು ಮಾಡಿ
ನೋಡಿಯೇ ನೋಡಿದ

“ನಾನು ಅನಂತ”

“ಯಾವ ಅನಂತನೊ?
ಇದೇ ಹೆಸರಿನ
ನನ್ನ ಮೊಮ್ಮಗನಿದ್ದ
ಅವನ ತಂಟೆಯೂ
ದಡ್ಡ ಬುದ್ಧಿವಂತಿಕೆಯೂ
ನನ್ನ ಹೆಗಲ ಬಿಟ್ಟಿಳಿಯದ ತುಂಟಾಟವೂ

ಈಗ ಹೇಗಿದ್ದಾನೊ ಏನೊ?
ಜ್ಞಾನಕ್ಕೆ ದೇಶ ಬಿಟ್ಟ
ದಂಡಿ ದುಡಿಯಲು ಇಲ್ಲಿನ ಮೋಹ ಬಿಟ್ಟ
ಹಸಿವೆಂದು ಅಲ್ಲಿಯದನ್ನನುಭವಿಸಿದ
ಬೇರು ಇಳಿಯದಲ್ಲಿ ಬೆಳೆಯಬೇಕೆಂದ
ಆ ಪರಪುಟ್ಟನ ಈ ದೃಷ್ಟಿ ಮಂಜಾದವನು
ನೋಡಿಯಾನೇನು?”
ಅಜ್ಜ ವಟಗುಟ್ಟಿ ಒಳ ಆಸೆ ಬಿಚ್ಚಿಟ್ಟ

ಸಾವು ಸಮೀಪಿಸಿದಲ್ಲಿರಿಸಿಕೊಂಡು
ಯೌವನದ ನೆನಪುಗಳಲ್ಲಿ
ಕನಸುಗಳಷ್ಟನ್ನೆ ಉಳಿಸಿಕೊಂಡು
ಭೂತವ ರಮಿಸುತ್ತ
ವರ್ತಮಾನವ ಕಳೆದುಕೊಂಡ
ಭವಿಷ್ಯವಿಲ್ಲದ ಅಜ್ಜ!

ನಾನೆ ಅವನು
ನಿನ್ನ ಅವನಂತಾಗದವನು
ಕನಸ ಕೂಸಿನ ಗುರುತು
ಹೆಗಲ ಸವೆಸಿದವನೊಳ ಹೊಕ್ಕು
ಹೇಳುವುದು ಹೇಗೆ
ಅವನ ಭ್ರಮೆಯನ್ನು
ನನ್ನ ಭ್ರಮಣೆಯನ್ನು?!

(ಚಿತ್ರಕೃಪೆ: ಅಂತರ್ಜಾಲದಿಂದ)

(ಕನ್ನಡ ಪ್ರತಿಲಿಪಿಯಲ್ಲಿ ಪ್ರಕಟ: Link: http://kannada.pratilipi.com/anantha-ramesh/avanagada-nanu)

2 thoughts on “ಅವನಾಗದ ನಾನು

  1. Anand ಹೇಳುತ್ತಾರೆ:

    ಅದ್ಭುತವಾಗಿ ಮೂಡಿದೆ. ಈ ಸಾಲಗಳು ವಿಶೇಷವಾಗಿ ಮನ ತಟ್ಟಿದವು.
    “ಬೇರು ಇಳಿಯದಲ್ಲಿ ಬೆಳೆಯಬೇಕೆಂದ”, “ಅವನ ಭ್ರಮೆಯನ್ನು ನನ್ನ ಭ್ರಮಣೆಯನ್ನು?!”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s