ಹೊಸತಿರಲಿ

jasmine-flowers

ಸೆಳೆತದೆದುರು ಸಂಣ
ಹರಿಣ ಈಜಿ ನೆರೆದಾಟಿ
ಭೂ ಸ್ಪರ್ಷ …
ಉಗಾದಿ

ಸವೆದ ದಾರಿ ಸರಿಸಿ
ಹೊಸ ಹಾರಿನಲ್ಲಿಎತ್ತರದ
ಮರದಲ್ಲಿ ಹಕ್ಕಿ ಗೂಡು …
ಉಗಾದಿ

ವಸಂತಗಳ ಮುಕ್ಕಿದ
ಮುದಿಯಾಗದವರು ಹಕ್ಕು
ಚಲಾಯಿಸುವ ಸಾಲು …
ಉಗಾದಿ

ಚರ್ಮಕ್ಕಂಟಿದ
ಮನಸ್ಸುಗಳ ಒಗೆದೊಗೆದು
ಒಪ್ಪ ಓರಣ ಧಾರಣ …
ಉಗಾದಿ

ಹಳಿವ ನಾಲಿಗೆಗಳಲ್ಲಿ
ಸಮ್ಮಾನಿಸುವ ಪ್ರಜ್ಞೆ
ಜೇನ ಹನಿ ದನಿಗಳು…
ಉಗಾದಿ

ಏಕಲವ್ಯರ ಉದ್ದಂಡ
ಸವಲುತ್ತುಗಳ ಉಡಾಫ಼ೆ
ತೊರೆದು ಬಿದ್ದಿವೆ …
ಉಗಾದಿ

ಕಂದನ ಮುಷ್ಟಿಯಲ್ಲಿ
ನಗುವ ಹೊಳೆವ  ನಕ್ಷತ್ರಗಳ
ಹೊಸ ವಿಸ್ಮಯಗಳು…
ಉಗಾದಿ

ಶಿಲೆಯ ತಲೆಗೆ
ಮನುಜ ಮುಡಿಗೇರದೆ ಹೂ
ಗಿಡಗಳಲ್ಲಿ ನಳನಳಿಸಿ…
ಉಗಾದಿ

6 thoughts on “ಹೊಸತಿರಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s