ಇದೆ ಎಲ್ಲ

Krisna

ದುಂಬಿ,
ನಿನ್ನ ಮಧು ಬೇಡ
ನಲ್ಲೆಯ ಚುಂಬನವಿದೆ

ಗುಲಾಬಿ,
ನಿನ್ನ ಕೀಳುವುದಿಲ್ಲ
ನನ್ನವಳ ಕದಪುಗಳಿವೆ

ಮೀನೆ,
ನೀನೀಗ ಸ್ವತಂತ್ರ
ಅವಳ ಕಂಗಳ ಈಜಾಟವಿದೆ

ನವಿಲೆ,
ನಿನ್ನ ಹುಡುಕುವುದಿಲ್ಲ
ನಲ್ಲೆಯ ಬಿನ್ನಾಣ ನಡಿಗೆಯಿದೆ

ಶ್ರೀಗಂಧವೆ,
ತಬ್ಬಿ ಬೆವರುವವಳಿದ್ದಾಳೆ
ಪರಿಮಳಕ್ಕೆ ತೀಡುವುದಿಲ್ಲ

ಸಂಗೀತವೆ,
ಇನಿದನಿಯ ಇನಿಯಳಿದ್ದಾಳೆ
ನೀ ವಿಶ್ರಮಿಸಬಹುದಲ್ಲ

ಜಂಜಡವೆ,
ಬರಸೆಳೆವ ತೋಳುಗಳಿವೆ
ನಿನಗಿಲ್ಲಿ ಎಡೆಯಿಲ್ಲ

ಯೋಗಿಯೆ,
ನಲ್ಲೆಯ ಸಾಂತ್ವನವಿದೆ
ಧ್ಯಾನಸ್ತನಾಗಿರುವೆ-ನಲ್ಲ

***
(ಸಖಿ ೩೧.೧೨.೨೦೧೫ ಪ್ರಕಟಿತ )

( ಚಿತ್ರ ಕೃಪೆ:ಅಂತರ್ಜಾಲ )

6 thoughts on “ಇದೆ ಎಲ್ಲ

  1. ಕವಿತೆಯ ಚಮತ್ಕಾರಿಕ ಹೊಳಹು, ಸರಳ-ಪರಿಚಿತ-ನಿತ್ಯ ಪ್ರಸ್ತುತ ಹೂರಣ, ತನ್ನೆಲ್ಲ ಸೊಗಡು ಸೊಬಗು ಸೊಗಸಿನೊಡನೆ ಮುದಾಹ್ಲಾದ ನೀಡಿತು. ಪದಗಳ ಜೀಣತನದಲ್ಲೆ ಕವಿ – ಕವಿತೆಯ ಜಾಣತನವು ಬಯಲಾಗಿದೆ 😊

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s