ಬೇಕಿಲ್ಲ ಬೋಧಕ

thinker

ಅರಿವಿನರಮನೆಯಲ್ಲಿ
ಕುಳಿತು ಸಿಹಿಯಲ್ಲದ
ಕಹಿಯಲ್ಲದ ಒಗರಲ್ಲದ
ರುಚಿಯ ಗ್ರಂಥದಿಂದ
ಸವಿಯುತ್ತಿದ್ದ

ಬೂಟುಗಾಲಲ್ಲಿ ಒದೆದ ಸದ್ದು
’ಅರಮನೆ”ಯ ಬಿದಿರತಾಟು
ದಭಾರನೆ ಸರಿದು ಒಳ
ಬಂದ ಖಾಕಿ ಭಾಗ್ಯದ ಬಂಟ
’ಇವನೇಯೇನು?’ ಕೇಳಿದ
ಜೊತೆಯಲ್ಲಿ ಬಂದ
ಬೆರಳುಂಗುರಗಳಲ್ಲಿ
ಜಾತಿವಾರು ಹರಳ
ಮುದ್ರೆ ಉಂಗುರಗಳಲ್ಲಿ
ಅಂಟಿಸಿಕೊಂಡವನ

’ಹೌದೌದು ಇವನೇ’
ತೋರಿದ ಎತ್ತಿ ಕೈ ಬೆರಳು
ಫಳ ಫಳಸಿತು ಅರಿವಿನಗರಮನೆ

’ಇವನೆ ಮತ್ತುಳ್ಳ ಹೊಗೆ ನುಂಗುವವನಿಗೆ
ಪರಮ ಪುಷ್ಟಿಯ ಬಾಡುಣ್ಣುವವನಿಗೆ
ಸೆರೆಗೆ ಶರಣಾದವನಿಗೆ
ಜೂಜಿಗೆ ಜೋತಾಡುವವನಿಗೆ
ದರೋಡೆ ದಗಾಕೋರ ವಂಚಕನಿಗೆ
ಲಂಚವಿಲ್ಲದೆ ಹುಲ್ಲುಕಡ್ಡಿಯೂ
ಅಲ್ಲಾಡ ಬಿಡದವನಿಗೆ
ಜಾತಿವಿಷ ಕಕ್ಕುವವನಿಗೆ
ವ್ಯಭಿಚಾರಿಗೆ ವಿಪರೀತನಿಗೆ
ಅದು ಕೂಡದು ಕೂಡದು
ಎಂದು ಸಿಹಿ ಧ್ವನಿಯಲ್ಲಿ ಬೇಡಿ
ಎಲ್ಲರಲ್ಲೂ ಪಾಪ
ಪ್ರಜ್ಞೆಯ ಹರಿಯ ಬಿಟ್ಟವನು!

ಕುಡಿವ ನೀರಿನಲ್ಲಿ ವಿಷ
ತಿನ್ನುವನ್ನದಲ್ಲಿ ಪಾಷಾಣ
ಸಸ್ಯಗಳಲ್ಲಿ ಎಂಡೋಸಲ್ಫಾನ
ಎಚ್ಚರೆಚ್ಚರವೆಂದು
ಭಯ ಬೆಳೆಯುತ್ತಿರುವವನು

ಆತ್ಮಹತ್ಯೆಯ ಸಲೀಸು ರಸ್ತೆಗೆ
ಅಡ್ಡಡ್ಡ ಮಲಗಿ ಕಾಲಿಗೇ ಕುಣಿಕೆ ಹಾಕಿ
ಪರಿಹಾರ ಗಂಟಿಗೆ ಎರವಾಗುವವನು

ನಮ್ಮ ಬಿಪಿಎಲ್ಕಾರ್ಡ ಬೇಸಾಯ
ದ ಬಿಟ್ಟಿ ಬೆಳೆ ನಮ್ಮ ಹಕ್ಕು ಎಂದು
ದರ್ದಿಗೆ ಒಂದಷ್ಟು ಮಾರಿ ಮೈತುಂಬ
ಮತ್ತು ತುಂಬಿಸಿಕೊಂಡವರಿಗೂ
ಪ್ರಜ್ಞೆ ತಪ್ಪಿಸುತ್ತಿದ್ದಾನೆ ಐವಾನು

ಸತ್ಯ ಹೇಳುತ್ತ
ನೆಮ್ಮದಿಯ ಸುಳ್ಳಿಗೆ ಕಿಚ್ಚಿಡುತ್ತ
ಹಳೆ ಕಥೆಗಳ ತೆರೆದು
ಬೆಳಕ ಹಿಡಿದು
ಸ್ವಾಭಿಮಾನದ ಹಾಡ ಘೀಳಿಟ್ಟು
ಗೋರ್ಕಲ್ಲುಗಳ ಮೆದುವಾಗಿಸುವ
ತಂತ್ರ ಹೊಸೆಯುತ್ತ
ಹೊಟ್ಟೆ ಭಾಷೆಗೆ ಭಾಷ್ಯಬರೆವ
ದಂಡಿನ ಕಸುಬು
ಕಿತ್ತುಕೊಳ್ಳುತ್ತ
ನಾಸ್ತಿಕರಷ್ಟೇ
ವಿಚಾರವಾದಿಗಳೆಂದು
ಒಪ್ಪಿಕೊಳ್ಳದವನು
ನಾಡು ನುಡಿ ಸಂಸ್ಕೃತಿಗಳ
ನಮ್ಮತನಗಳ ಒಳಗೆ
ಜೊಳ್ಳುತನವಿಲ್ಲವೆನ್ನುವವನು

ಸೂರ್ಯನಿಗೆ ಮುಖಮಾಡಿ
ಮೈಬಗ್ಗಿಸಿ ಕೊಬ್ಬುಕರಗಿಸಿರೆಂದು
ಸೋಮಾರಿ ಸ್ಲೋಗನ್ನುಗಳ
ವಿಶ್ವಕ್ಕೆ ತುಂಬಿ
ದೇಶವನ್ನು ಹರಾಜಿಗಿಡುವ ಸನ್ನಾಹಿ
ಬಿಟ್ಟಿ ಅನ್ನ ಅಪಾಯವೆಂದ ಉಪಾಯಿ
ಸರ್ಕಾರ ಭಾಗ್ಯಗಳ ಬೊಗಳೆ ಎಂದುಸುರಿ
ಕೈಗೆ ಕೆಲಸವಿರಲೆನ್ನುವ ಕುತಂತ್ರಿ’

…… ಮತ್ತೂ ಕೇಳಿಸುತ್ತಲೆ ಇತ್ತು
ಅರೆ !
ಬೆಂದ ಮಂದಿ ಜಮಾಯಿಸಿದರು
’ಜಿನ ಬುದ್ಧ ಬಸವ ಬೋಧಕರು
ಪಟ ಕ್ಯಾಲೆಂಡರುಗಳಲ್ಲಿ
ಮಾತ್ರ ಸೀಮಿತರು
ಉಳಿದೆಲ್ಲ ಪುರಾತನರು
ನಮ್ಮನೊಡೆದವರು’
ಎಂದು ಕೂಗಿದರು
ಅರಿವಿನರಮನೆಯವನ
ಹುಸಿನಗುವ ಕಸಿಮಾಡಿರೆಂದು
ಬೊಬ್ಬೆ ಹೊಡೆದು ತದುಕಲು
ತಯಾರಾದದ್ದೇ
ಖಾಕಿಯವನು ಮಹಜರು ಪುಸ್ತಕ
ಒಳಜೇಬಿನಿಂದ ಮೆಲ್ಲನೆ ಹೊರತೆಗೆದು
ಮುದ್ರೆ ಉಂಗುರದವನು ಕೊಟ್ಟ ಪೆನ್ನು
ಕಿವಿಗಿಟ್ಟುಕೊಂಡು ದಿಟದಲ್ಲಿ
ಕಾಯತೊಡಗಿದನು!

(ಚಿತ್ರ ಕೃಪೆ:ಅಂತರ್ಜಾಲ)

2 thoughts on “ಬೇಕಿಲ್ಲ ಬೋಧಕ

  1. ‘ಇದ್ದದ್ದನ್ನ ಇದ್ದ ಹಾಗೆ ಹೇಳಿದ್ರೆ, ಎದ್ದು ಬಂದು ಎದೆಗೊದ್ರು’ – ಅನ್ನೊ ಮಾತು ನೆನಪಾಯ್ತು. ವ್ಯವಸ್ಥೆಯ ಸಂಕೋಲೆ ಬಾಯಿಬಿಟ್ಟಾಡುವ ಬೋಧಕನನ್ನಿರಲಿ, ಮೌನದಲ್ಲೆ ಆಲೋಚಿಸುವ ಚಿಂತಕನನ್ನು ಬಿಡುವುದಿಲ್ಲವೇನೊ? ಚೆನ್ನಾಗಿದೆ 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s