ನಾನೆಂಬ ಪರಿಚಯ

IMG_1882

ಬ್ಲಾಗಿಗರು ಸ್ವಪರಿಚಯದ ಪುಟವೊಂದನ್ನು ಬರೆಯುತ್ತಾರೆ. ಅದನ್ನು ಓದಿ, ಅವರ ಬರವಣಿಗೆಗೆ ಕಣ್ಣು ಹಾಯಿಸಿದರೆ ನಮ್ಮವರೊಬ್ಬರು ಮನಸ್ಸನ್ನು ಹೊಕ್ಕಂತ ಅನುಭೂತಿ. ಆ ಸ್ವಾರ್ಥದಿಂದಲೊ ಏನೋ, ವಿಶೇಷಣಗಳಿಲ್ಲದ ನಾನು ಪರಿಚಯಿಸಿಕೊಳ್ಳುತ್ತಿದ್ದೇನೆ.

ಎ. ರಮೇಶ್ ಹೆಸರು ಮತ್ತೆ ಅದನ್ನು ವಿಸ್ತರಿಸಿ ’ಅನಂತ ರಮೇಶ್’
ಹುಟ್ಟೂರು ಉಡುಪಿಯ ಮಟ್ಟು.
ಓದಿದ್ದೆಲ್ಲ ಸಿ ಎಸ್ ಪುರ, ಗುಬ್ಬಿ, ತುಮಕೂರು.
ಪದವಿ ಬಿ.ಕಾಂ.,
ಕೆನರಾ ಬ್ಯಾಂಕಲ್ಲಿ ಮಾಡಿದ್ದು ಅಧಿಕಾರಿ ಕಾಮ್.

ರಮೇಶ ಅನ್ನುವುದು ಶ್ರೀನಿವಾಸ, ಮಂಜುನಾಥರಂತೆ ತುಂಬಾ ಬಳಕೆಯ ಹೆಸರು. ಹಾಗಾಗಿ ನನ್ನ ಹೆಸರಿಗೆ ಒಂದು ಕೊಂಡಿ/ವಿಶೇಷಣ ಇರಲೇ ಬೇಕು. ಯಾವ ರಮೇಶ ? ಅನ್ನುವ ಗೊಂದಲಕ್ಕೆ ನನ್ನ ಬೆನ್ನ ಹಿಂದೆ ಗುರುತಿಸುವುದೆ ಹೀಗೆ.

ಅನಂತಣ್ಣ ವನಜಳ ಮಗ, ಬೇಬಿ, ಜಯ, ಸುಂದರರ ತಮ್ಮ, ಕಿಟ್ಟು, ಬಾಲು, ವಿಮಲರ ಅಣ್ಣ ಹಾಗೆಯೇ ಸುಲೋಚನಾಳ ಗಂಡ. ನನಗೆ ಮಕ್ಕಳಾದ ಮೇಲೆ ಅಂಟಿದ ಹೆಸರು ಸೂರ್ಯಾಂಶು, ಸುಧಾಂಶುರ ಅಪ್ಪ !

ಮಾವ, ಷಡ್ಕ, ಚಿಕ್ಕಪ್ಪ, ದೊಡ್ಡಪ್ಪ, ನಂಟ ಇತ್ಯಾದಿ ಕೊಂಡಿಯನ್ನೂ ಉಪಯೋಗಿಸಿ ನನ್ನ ಪರಿಚಯ ಬೆನ್ನಿನಲ್ಲಿ ನಡೆಯುತ್ತದೆ.

ನನ್ನೆಲ್ಲ ಸ್ನೇಹಿತರ ಹೆಸರುಗಳು ನನ್ನ ಹೆಸರ ವಿಶೇಷಣಗಳೇ. ನನಗೆ ಗುರುಗಳ ಪರಂಪರೆಯೆ ಸಿಕ್ಕಿದೆ. ಋಣಿ. ಮಾರ್ಗದರ್ಶಕರೂ ಸಿಕ್ಕಿದ್ದಾರೆ. ಆಭಾರಿ. ಇವತ್ತಿಗೂ ನನ್ನ ಅಭಿಮಾನದ ಮೇಷ್ಟ್ರು ಕೆ ಟಿ ತಿಮ್ಮಯ್ಯ, ಮಿಡ್ಲ್ ಸ್ಕೂಲಿನಲ್ಲಿ. ನೆನಪಿಟ್ಟಿದ್ದಾರೆ. ಅದೇ ಆಶೀರ್ವಾದ.

ಬರೆಯುವ ಹುಚ್ಚಿದೆ. ಸುಪ್ತದಲ್ಲಿ ಲಹರಿಗಳು ಹೆಚ್ಚಿವೆ. ಹಂಚಲು ಬ್ಲಾಗ್ ಇದೆ. ಓದುಗ ಲಕ್ಷಕ್ಕೊಬ್ಬರು ಸಿಕ್ಕಿ, ಈ ಓದಿನಲ್ಲೂ ಹಸಿರಿದೆ ಅಂದುಕೊಂಡರೆ ಭತ್ತದ ಗದ್ದೆಗೆ ನೀರು ಹಾಯಿಸಿದ ಸುಖ ಅಥವಾ ಚಂದ್ರನಿಗೆ ಏಣಿ ಇಟ್ಟು ನಕ್ಷತ್ರ ಹಿಡಿದ ಭ್ರಮೆ.

5 thoughts on “ನಾನೆಂಬ ಪರಿಚಯ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s